ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹತ್ತಿಗೂಡೂರು ಬಸ್ ನಿಲ್ದಾನದ ದುಸ್ಥಿತಿ ಕೇಳೋರಿಲ್ಲ, ಮೇಲ್ಚಾವಣಿ ದಿನದಿಂದ ದಿನಕ್ಕೆ ನಶಿಸಿ ಬೀಳುವ ಪರಿಸ್ಥಿತಿಯಲ್ಲಿದೆ. ಸಾರ್ವಜನಿಕರು ಭಯದಿಂದ ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ. ನೂರಾರು ಬಸ್ಸುಗಳು ಓಡಾಡುತ್ತಿರುವ, ಸಾವಿರಾರು ಜನ ಪ್ರಯಾಣಕರು ಕುಳಿತುಕೊಳ್ಳುವ ಬಸ್ ನಿಲ್ದಾಣವು ಅಶುಚಿತ್ವದಿಂದ ಕೂಡಿದ್ದು, ಬಸ್ ನಿಲ್ದಾಣದ ಸುತ್ತಮುತ್ತ ಗಿಡಗೆಂಟೆ ಬೆಳೆದು ನಿಂತಿವೆ.

ಸಾರ್ವಜನಿಕರು ಅದರಲ್ಲೂ ಮಹಿಳಾ ಪ್ರಯಾಣಕರಿಗೆ ಶೌಚಾಲಯ ಭಾಗ್ಯವಿಲ್ಲ ಶೌಚಾಲಯ ಸಂಪೂರ್ಣ ಮುಚ್ಚಲಾಗಿದೆ.ಇನ್ನು ಬಸ್ ನಿಲ್ದಾಣದ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆ ಪಕ್ಕದಲ್ಲಿ ಒತ್ತುವರಿ ಮಾಡಿಕೊಂಡು ಸಾರಿಗೆ ಇಲಾಖೆ ಅಧಿಕಾರಿಗಳು ನಿವೇಶನದ ಟೆಂಡರ್ ಕರೆದು ಬೀದಿಬದಿ ವ್ಯಾಪಾರಸ್ಥರಿಂದ ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ ಅಲ್ಲದೆ ರಸ್ತೆಯ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ಸಂಬಂಧಪಟ್ಟ ರಸ್ತೆ ಮಧ್ಯದಲ್ಲಿ ಅಂಗಡಿ ಮುಗ್ಗಟ್ಟುಗಳಿಂದ ಬಾಡಿಗೆ ತೆಗೆದುಕೊಳ್ಳುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಲೋಕೋಪ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಕೇಳುತ್ತಿಲ್ಲ ನಮಗೆ ಸಂಬಂಧ ಇಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ .
ಇನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಬೀದಿ ಬದಿ ವ್ಯಾಪಾರಸ್ಥರಿಂದ ಪ್ರತಿ ತಿಂಗಳು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ, ಈ ವಿಷಯದ ಬಗ್ಗೆ ಶಹಪುರ್ ವ್ಯವಸ್ಥಾಪಕ ಸಾರಿಗೆ ಇಲಾಖೆ ಗಮನಕ್ಕೆ ತಂದಿದ್ದೇವೆ ಯಾವುದೇ ಪ್ರಯೋಜನವಾಗಿಲ್ಲ . ಕುಳಿತುಕೊಳ್ಳುವ ಪ್ರಯಾಣಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿದೆ ಸಾರಿಗೆ ಇಲಾಖೆ ಅಧಿಕಾರಿಗಳು ಎಲ್ಲ ವ್ಯವಸ್ಥೆಯನ್ನು ಸರಿಪಡಿಸಬೇಕು ಅನಾಧಕೃತವಾಗಿ ಕಾನೂನು ನಿಯಮವನ್ನು ಗಾಳಿಗೆ ತೂರಿ ಟೆಂಡರ್ ಮಾಡಿ ಬೀದಿ ಬದಿ ವ್ಯಾಪಾರಗಳಿಂದ ಪ್ರತಿ ತಿಂಗಳ ವರ್ಷನಗಂಟಲೆ ಬಾಡಿಗೆ ಪಡೆದುಕೊಳ್ಳದನ್ನು ನಿಲ್ಲಿಸಬೇಕು .ಕಾನೂನು ವಿರುದ್ಧವಾಗಿ ಇದನ್ನು ತಕ್ಷಣ ನಿಲ್ಲಿಸಿ ಇನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಒತ್ತುವರಿ ಮಾಡಿದ್ದಾರೆ. ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಹೋರಾಟವೇ ಅನಿವಾರ್ಯವಾಗಲಿದೆ ಎಂದು ದಲಿತ ಸಂಘರ್ಷ ಸಮಿತಿ ವಿಭಾಗಿಯ ಸಂಚಾಲಕ ಶರಣರೆಡ್ಡಿ ಹತ್ತಿಗೂಡುರ್ ಪತ್ರಿಕೆ ಮೂಲಕ ಒತ್ತಾಯಿಸಿದರು.
