ಜಗಳೂರು : ಜಗಳೂರಿನ ಗೌಡಗೊಂಡನಹಳ್ಳಿ ಗ್ರಾಮದ ನಾಗರಾಜಪ್ಪ ಎಂಬ ರೈತನೋರ್ವ ಸಾಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಅತಿಯಾದ ಅನಾವೃಷ್ಟಿಯಿಂದ ಈ ವರ್ಷದ ಫಸಲು ಕೈಗೆ ಸಿಗದ ಕಾರಣ ರೈತ ಕಂಗಾಲಾಗಿದ್ದಾನೆ. ಇನ್ನು ಸರಿಯಾದ ಫಸಲು ಬಾರದ ಹಿನ್ನೆಲೆ ರೈತ ಸಾಲದ ಸುಳಿಯಲ್ಲಿ ಸಿಲಿಕಿಕೊಂಡಿದ್ದಾನೆ. ಸದ್ಯ ಸಾಲದ ಬಾಧೆಯನ್ನು ತಾಳಲಾರದೆ ಕೊನೆಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರೈತ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಎರಡು ಲಕ್ಷ ಸಾಲ ಮಾಡಿದ್ದು, ನಂತರ ಖಾಸಗಿ ಬ್ಯಾಂಕ್ನಲ್ಲಿ ಫೈನಾನ್ಸ್ ಮತ್ತು ಧರ್ಮ, ಸ್ಥಳ , ಗ್ರಾಮಾಭಿವೃದ್ಧಿ ಸಂಘದಲ್ಲಿ ಸಾಲ ಪಡೆದಿದ್ದು ಈ ಬಾರಿಯ ಬೆಳೆ ಕೈಗೆ ಸಿಗದ ಹಿನ್ನೆಲೆ ಆತ್ಮ,ಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
