ಉಡುಪಿ : ನಾಳೆ ಪ್ರಯಾಯ ಪುತ್ತಿಗೆ ಮಠದಲ್ಲಿ ಶುಕ್ರವಾರ ನಡೆಯಲಿರುವ ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಧ್ರ ಮೋದಿ ಆಗಮಿಸಲಿದ್ದಾರೆ. ಮೋದಿ ಆಗಮನ ಹಿನ್ನೆಲೆ ಉಡುಪಿ ಮೈದಾನದ ಸುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಮೋದಿ ಆಗಮನ ಹಿನ್ನೆಲೆ ಉಡುಪಿ ಮೈದಾನದಲ್ಲಿ ಹೆಚ್ಚುವರಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಬುಧವಾರ ದೆಹಲಿಯಿಂದ ಆಗಮಿಸಿದ ವಾಯುಸೇನೆಯ ಅಧಿಕಾರಿಗಳು ಅವುಗಳ ಗುಣಮಟ್ಟವನ್ನು ಪರೀಕ್ಷೆ ಮಾಡಲಾಯಿತು.
ಆದಿಉಡುಪಿಯಿಂದ ಕೃಷ್ಣಮಠದ ವರೆಗೆ ಪ್ರಧಾನಮಂತ್ರಿ ಸಾಗುವ 2ಕಿ.ಮೀ ಮತ್ತು 1ಕಿ.ಮೀ. ರೋಡ್ ಶೋ ನಡೆಸುವ ಮೂಲಕ ಪ್ರಧಾನಿ ವಾಹನದ ಸಂಚಾರದ ರಿಹರ್ಸಲ್ ನಡೆಸಲಾಗುತ್ತಿದೆ.
