Karnatakakaryaniratapatrakartarasangha ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ:
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ವಿಜಯನಗರದ ಆದಿಚುಂಚನಗಿರಿಯ ಮಠದ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಅದ್ದೂರಿಯಾಗಿ ನೇರವೇರಿತು.

ಸಮಾರಂಭವನ್ನು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರಕಟಿತ ಕೃಷಿ ಮಾರ್ಗ ಪುಸ್ತಕ ಬಿಡುಗಡೆ ಮಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೋಮಶೇಖರ್ ಗಾಂಧಿ ಪತ್ರಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಸಂಘ ಸ್ಥಾಪನೆಯಾಗಿ 16 ವರ್ಷಗಳಾದ್ರು ಒಂದು ಸ್ವಂತ ಕಚೇರಿ ಇಲ್ಲ. ಈ ಬಗ್ಗೆ ಸಚಿವರು ನಮ್ಮ ಸಂಘಕ್ಕೆ ಸರ್ಕಾರದ ವತಿಯಿಂದ ಒಂದು ಜಾಗ ಕೊಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಕಾರ್ಡ್ ವಿತರಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಅವರು ಸರ್ಕಾರದ ಜೊತೆ ಮಾತಾನಾಡಿ ಸಂಘಕ್ಕೆ ಜಾಗ ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೇ ಪತ್ರಕರ್ತರಿಗೆ ಸಿಎ ಸೈಟ್ ಕೊಡಿಸುವ ಬಗ್ಗೆಯೂ ಭರವಸೆ ನೀಡಿದರು.
ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸೋಮಶೇಖರ್ ಗಾಂಧಿ ನೇತೃತ್ವದಲ್ಲಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಸಚಿವರು ಹರಸಿದರು.
ಸಮಾರಂಭದಲ್ಲಿ ಪತ್ರಿಕಾ ದಿನಾಚರಣೆ ಪ್ರಯುಕ್ತ ಹಲವು ಹಿರಿಯ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಹಿರಿಯಾ ಸಿನಿಮಾ ಛಾಯಾಗ್ರಾಹಕ ನಾಗೇಶ್ ಕುಮಾರ್, ವಿಜಯವಾಣಿ ದಿನಪತ್ರಿಕೆ ಸಹಾಯಕ ಸಂಪಾದಕ ಪ್ರಭುದೇವ್ ಶಾಸ್ತ್ರಿ ಮಠ, ಟಿವಿ9 ಕನ್ನಡ ಮುಖ್ಯ ನಿರ್ಮಾಪಕರಾದ ರಂಗನಾಥ್ ಭಾರಧ್ವಾಜ್, ನ್ಯೂಸ್ 18 ಕನ್ನಡ ಔಟ್ ಪುಟ್ ಎಡಿಟರ್ ಮಧು ಎಂ.ಉತ್ತುವಳ್ಳಿ, ಹಿರಿಯ ಪತ್ರಕರ್ತ ಸಂಗಮದೇವ್ ಅವರಿಗೆ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಸೋಮಶೇಖರ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ, ರಾಜ್ಯ ಸಮಿತಿ ಸದಸ್ಯ ಹೆಚ್.ಆರ್.ರವೀಶ್, ಉಪಾಧ್ಯಕ್ಷೆ ಹೆಚ್.ಎಸ್.ಪರಿಮಳಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಮಲ್ಲಿಕಾರ್ಜುನಯ್ಯ, ಲಿಂಗರಾಜ್ ಜಿ.ನೊಣವಿನಕೆರೆ, ರಾಜಗಿರಿ ಪ್ರದೀಪ್, ಶ್ಯಾಮ್ ಎಸ್, ಗಂಡಸಿ ಸದಾನಂದಸ್ವಾಮಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
