State Anthem: ಕುವೆಂಪು ವಿರಚಿತ ನಾಡಗೀತೆಯಲ್ಲಿ ಬದಲಾವಣೆ..! ಇಷ್ಟು ದಿನ ಬಿಟ್ಟಿದ್ದ ಆ ಪದ ಮತ್ತೆ ಸೇರ್ಪಡೆ..! ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ‘ ನಾಡಗೀತೆಯಲ್ಲಿ ಬದಲಾವಣೆ ಆಗಲಿದೆ. ಪುರುಷೋತ್ತಮ ಬಿಳಿಮಲೆಯ ಕಮಿಟಿ ಸಲಹೆ ಮೇರೆಗೆ ನಾಡಗೀತೆಯಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ.
ಬೆಂಗಳೂರು, ಜು.14: ಕನ್ನಡಿಗರ ಶ್ರೀಮಂತ ಸಂಸ್ಕೃತಿ, ಇತಿಹಾಸ, ಭೌಗೋಳಿಕ ವೈವಿಧ್ಯತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವ, ರಾಷ್ಟ್ರಕವಿ ಕುವೆಂಪು ವಿರಚಿತ ‘ಜಯ ಭಾರತ ಜನನಿಯ ತನುಜಾತೆ‘ ನಾಡಗೀತೆಯಲ್ಲಿ (State Anthem) ಬದಲಾವಣೆ ಆಗಲಿದೆ.
ಪುರುಷೋತ್ತಮ ಬಿಳಿಮಲೆಯ ಕಮಿಟಿ ಸಲಹೆ ಮೇರೆಗೆ ನಾಡಗೀತೆಯಲ್ಲಿ ಬದಲಾವಣೆ ತರಲು ಸರ್ಕಾರ ಮುಂದಾಗಿದೆ. ಇಷ್ಟು ದಿನಗಳ ಕಾಲ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರನ್ನ ಬಿಡಲಾಗಿತ್ತು. ಇದೀಗ ಮತ್ತೆ ಬೌದ್ಧ ಧರ್ಮ ಹೆಚ್ಚು ಪ್ರಚಲಿತವಾದ ಹಿನ್ನೆಲೆಯಲ್ಲಿ ಧರ್ಮದ ಹೆಸರು ಸೇರ್ಪಡೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೌದ್ಧ ಧರ್ಮದ ಹೆಸರು ಸೇರ್ಪಡೆ

ರಾಷ್ಟ್ರಕವಿ ಕುವೆಂಪು ರಚಿಸಿರುವ ನಾಡಗೀತೆಯಲ್ಲಿ ಬದಲಾವಣೆ ಆಗಲಿದೆ. ಜಯ ಭಾರತ ಜನನಿಯ ತನುಜಾತೆಯಲ್ಲಿ ಮತ್ತೆ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಮಿಟಿ ಸಲಹೆ ನೀಡಿದೆ. ನಾಡಗೀತೆಯಲ್ಲಿ ಇಷ್ಟು ದಿನಗಳ ಕಾಲ ಬೌದ್ಧ ಧರ್ಮದ ಹೆಸರನ್ನ ಬಿಡಲಾಗಿತ್ತು, ಇದೀಗ ಮತ್ತೆ ಬೌದ್ಧ ಧರ್ಮ ಹೆಚ್ಚು ಪ್ರಚಲಿತವಾದ ಹಿನ್ನೆಲೆ ಧರ್ಮದ ಹೆಸರು ಸೇರಿಸಲು ಕಮಿಟಿ ಸಲಹೆ ನೀಡಿದೆ.
