ROOPASHREE VARKADI: ನಟಿ ರೂಪಶ್ರೀ ವರ್ಕಾಡಿ ಅವರು ಕನ್ನಡದ ‘ಮಿಥ್ಯ’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ
ಮಂಗಳೂರು, ಜು.22: ದಕ್ಷಿಣ ಕನ್ನಡ ಜಿಲ್ಲೆಯ ಅದ್ಭುತ ಪ್ರತಿಭೆ ನಟಿ ರೂಪಶ್ರೀ ವರ್ಕಾಡಿ ಅವರು ‘ಮಿಥ್ಯ’ ಚಿತ್ರದ ಅದ್ಭುತ ನಟನೆಗಾಗಿ 72ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಸಾಧನೆ ಮಾಡಿದ ಕನ್ನಡದ ಮೊದಲ ಪೋಷಕ ನಟಿ ಎಂಬ ಹೆಗ್ಗಳಿಕೆಗೆ ರೂಪಶ್ರೀ ಪಾತ್ರರಾಗಿದ್ದಾರೆ. ಪ್ರಶಸ್ತಿ ಘೋಷಣೆಯ ನಂತರ ಅವರು ಮಾಧ್ಯಮಗಳ ಜೊತೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ನಟಿ ರೂಪಶ್ರೀ ವರ್ಕಾಡಿ ಅವರು ಕನ್ನಡದ ‘ಮಿಥ್ಯ’ ಚಿತ್ರದಲ್ಲಿನ ಅದ್ಭುತ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಕೇವಲ 500 ರೂ.ಗಳ ಸಂಭಾವನೆಗೆ ರಂಗಭೂಮಿಗೆ ಕಾಲಿಟ್ಟ ತಮ್ಮ ಹಳೆಯ ದಿನಗಳನ್ನು ನೆನೆಪಿಸಿಕೊಂಡು ಭಾವುಕರಾದರು.
ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ರೂಪಶ್ರೀ, ರಂಗತರಂಗ ಕಾಪು, ಕಲಾ ಸಂಗಮ ಮಂಗಳೂರು, ಇನ್ನೂ ಹಲವಾರು ನಾಟಕ ತಂಡಗಳಲ್ಲಿ ಹಾಗೂ ‘ಲುಂಗಿ’, ‘ಸುರ’, ತುಳು ಅನೇಕ ಚಿತ್ರಗಳಲ್ಲಿ ನಟಿಸಿರುವ ಅವರು, ಇಂದು ರಾಷ್ಟ್ರಮಟ್ಟದಲ್ಲಿ ಕರಾವಳಿಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

