T.A.SHARAVANA VISIT ART OF LIVING: ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಹಾಗೂ ಉಪ ನಾಯಕರು ಜೆಡಿಎಸ್ ಶಾಸಕಾಂಗ ಪಕ್ಷ ಶ್ರೀ ಟಿ.ಎ.ಶರವಣ ಭೇಟಿಯಾ
ಗಿ ಶ್ರೀ ರವಿಶಂಕರ ಗುರೂಜಿಯವರ ದಿವ್ಯ ಆಶೀರ್ವಾದ ಪಡೆದರು.
ಬೆಂಗಳೂರು, ಸೆ.01: ಗೌರವಾನ್ವಿತ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶ್ರಮಕ್ಕೆ ಕರ್ನಾಟಕ ವಿಧಾನ ಪರಿಷತ್ ಹಾಗೂ ಉಪ ನಾಯಕರು ಜೆಡಿಎಸ್ ಶಾಸಕಾಂಗ ಪಕ್ಷ ಶ್ರೀ ಟಿ.ಎ.ಶರವಣ ಭೇಟಿ ನೀಡಿ, ಪೂಜ್ಯ ಗುರೂಜಿಯವರ ದರ್ಶನ ಪಡೆದು, ಅವರ ದಿವ್ಯ ಆಶೀರ್ವಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಗುರುಜಿಯವರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕುರಿತು ಚರ್ಚಿಸಲಾಯಿತು. ಗುರೂಜಿಯವರ ಸರಳತೆ, ಆಧ್ಯಾತ್ಮಿಕ ಚಿಂತನೆ ಹಾಗೂ ಸಮಾಜದ ಒಳಿತಿಗಾಗಿ ಅವರ ಸೇವಾ ಮನೋಭಾವ ಸದಾ ನಮಗೆಲ್ಲರಿಗೂ ಪ್ರೇರಣೆಯಾಗಿದೆ.
ಗುರೂಜಿಯವರ ದಿವ್ಯ ಆಶೀರ್ವಾದವು ಜೀವನದಲ್ಲಿ ಶಾಂತಿ, ಸದ್ಬುದ್ಧಿ, ಸಕಾರಾತ್ಮಕ ಚಿಂತನೆ ಹಾಗೂ ಸಮಾಜಸೇವೆಯ ಹಾದಿಯಲ್ಲಿ ಮತ್ತಷ್ಟು ಶಕ್ತಿ ಮತ್ತು ಪ್ರೇರಣೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಸಮಾಜದ ಒಳಿತಿಗಾಗಿ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಸಂಕಲ್ಪ ಮಾಡಲಾಯಿತು.
