Darshan Case: These two actors’ testimony gives a big twist to the Darshan case!? Important hearing in court today..? – Darshan Case: ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಈ ಇಬ್ಬರು ನಟರ ಸಾಕ್ಷಿ!? ಇಂದು ಕೋರ್ಟ್ ಕಟಕಟೆಯಲ್ಲಿ ಮಹತ್ವದ ವಿಚಾರಣೆ..?
ರೇಣುಕಾಸ್ವಾಮಿ ಕೊಲೆಗೂ ಮುನ್ನ ದರ್ಶನ್ ಮಾಡಿದ ಪಾರ್ಟಿಯಲ್ಲಿ ಏನೆಲ್ಲಾ ಚರ್ಚೆ ನಡೆದಿತ್ತು ಎನ್ನುವ ಈ ಬಗ್ಗೆ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಸಾಕ್ಷ್ಯ ನುಡಿಯಲಿದ್ದಾರೆ.

ಬೆಂಗಳೂರು ಅ.13: ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ಗೆ ನಟ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಹಾಜರಾಗಲಿದ್ದಾರೆ. ಈ ಇಬ್ಬರು ನಟರಿಗೂ ಕೋರ್ಟ್ ಸಮನ್ಸ್ ನೀಡಿದ್ದು, ಕೊಲೆಗೂ ಮೊದಲು ಏನೆಲ್ಲಾ ಬೆಳವಣಿಗೆ ನಡೀತು? ಸ್ಟೋನಿ ಬ್ರೂಕ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಜೊತೆ ನಟ ದರ್ಶನ್ ಏನೆಲ್ಲಾ ಚರ್ಚೆ ಮಾಡಿದ್ರು ಎನ್ನುವ ವಿಚಾರದ ಬಗ್ಗೆ ಇಂದು ನಟರು ಸಾಕ್ಷಿ ನುಡಿಯುವ ಸಾಧ್ಯತೆ ಇದೆ. ಈ ಇಬ್ಬರು ನಟರ ಹೇಳಿಕೆಯಿಂದ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಾ?
ಇಂದು ಇಬ್ಬರು ನಟರು ಕೋರ್ಟ್ಗೆ ಹಾಜರು..?
ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯವು (ಸೆಷನ್ಸ್ ಕೋರ್ಟ್) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರು ಹಾಗೂ ದರ್ಶನ್ ಆಪ್ತರಾಗಿರೋ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆ ಇಂದು ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಇಬ್ಬರೂ ಕೋರ್ಟ್ಗೆ ಹಾಜರಾಗಿ ಸಾಕ್ಷ್ಯ ನುಡಿಯಲಿದ್ದಾರೆ.
ಪ್ರಮುಖ ಸಾಕ್ಷಿಗಳಾಗಿ ಪರಿಗಣನೆ..?
ಪಾರ್ಟಿಯಲ್ಲಿ ಏನೆಲ್ಲಾ ಆಯ್ತು ಅನ್ನೋ ಬಗ್ಗೆ ಇಂದು ಕೋರ್ಟ್ ಮುಂದೆ ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಸಾಕ್ಷಿ ನುಡಿಯಲಿದ್ದಾರೆ. 59ನೇ ಸಿಸಿಹೆಚ್ ಜಡ್ಜ್ ಮುಂದೆ ಈ ಇಬ್ಬರು ನಟರು ನೀಡೋ ಹೇಳಿಕೆ ನಟ ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಕಾದು ನೋಡಬೇಕಿದೆ.
