Sudeep: VS Ugrappa fiercely attacked actor Sudeep..?: - Sudeep: ನಟ ಸುದೀಪ್ ವಿರುದ್ಧ VS ಉಗ್ರಪ್ಪ ತೀವ್ರ ವಾಗ್ದಾಳಿ..?
ಅಭಿಮಾನಿಗಳ ಮುಂದೆ ವಿ.ಎಸ್.ಉಗ್ರಪ್ಪ ಕಿಚ್ಚನ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅವರು ಏನಂದ್ರು?

ಚಿತ್ರದುರ್ಗ ಅ.13 ರಂದು ಚಿತ್ರದುರ್ಗದಲ್ಲಿ ಮದಕರಿ ನಾಯಕರ ಜಯಂತೋತ್ಸವ ನಡೆದಿದೆ. ವಿ.ಎಸ್. ಉಗ್ರಪ್ಪ ರೋಷಾವೇಷದ ಭಾಷಣ ಮಾಡಿದ್ದು ಕಿಚ್ಚ ಸುದೀಪ್ ವಿರುದ್ದ ಗುಡುಗಿದ್ದಾರೆ.
ನಾಯಕ ಜನಾಂಗದ ಮನೆಯ ಮಗನಾಗಿದ್ದರೆ, ನಮ್ಮ ಜನರ ಮೀಸಲಾತಿಗೆ ಹೋರಾಡಿ. ಅಭಿಮಾನಿಗಳಿಂದ ಕೇಕೆ, ಶಿಳ್ಳೆ ಪಡೆಯೋದಲ್ಲ, ಇದೇ ಜನಾಂಗಗಳ ಪರ ಮೀಸಲಾತಿ ಹೋರಾಟಕ್ಕೆ ಬನ್ನಿ ಎಂದು ಉಗ್ರಪ್ಪ ಹೇಳಿದ್ದಾರೆ.
ಅಭಿಮಾನಿಗಳ ಮುಂದೆ ವಿ.ಎಸ್.ಉಗ್ರಪ್ಪ ಕಿಚ್ಚನ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಕಾರ್ಯಕ್ರಮ ಉದ್ದೆಶಿಸಿ ಮಾಜಿ ಸಚಿವ VS ಉಗ್ರಪ್ಪ ಭಾಷಣ ಮಾಡಿದ್ದು ವೇದಿಕೆಯ ಮೇಲೆ ಮದಕರಿ ನಾಯಕರ ಜನನ ವೃತ್ತಾಂತ ತಿಳಿಸಿದ್ದಾರೆ. ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರೊದಿಲ್ವೋ ಅಂಥ ಸಮಾಜ ಉದ್ಧಾರ ಆಗಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನ ಕೋರ್ಟ್ ಇಳಿಕೆ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಧಮ್ಮು ತಾಕತ್ತು ಇದ್ದರೆ ಹೋರಾಟಕ್ಕೆ ಇಳಿಯಲಿ. ಹೈ ಕೋರ್ಟ್ ಆದೇಶದ ಮೇಲೆ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಬೇಕು. ಮತ್ತೆ ಮೀಸಲಾತಿ ಪ್ರಮಾಣವನ್ನು 56% ಕ್ಕೆ ಏರಿಸಬೇಕು ಎಂದಿದ್ದಾರೆ.
ಸಂವಿಧಾನದ 9 ಶೆಡ್ಯೂಲ್ ಗೆ ಸೇರಿಸಿ, ಮೀಸಲಾತಿ ಹೆಚ್ಚಿಸಬೇಕು. ಚಿತ್ರದುರ್ಗದ ಬಸ್ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಮದಕರಿ ನಾಯಕರ ಹೆಸರು ಇಡಬೇಕು. ಡಿಸಿ ಕಚೇರಿಗೆ ಮದಕರಿ ನಾಯಕರ ಹೆಸರು ಇಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಉಗ್ರಪ್ಪ ಮನವಿ ಮಾಡಿದ್ದಾರೆ.
