Darshan Case: Party Pin To Pin Information Revealed? 5 page, 11 paragraph statement given success! - Darshan Case: ಪಾರ್ಟಿಯ ಪಿನ್ To ಪಿನ್ ಮಾಹಿತಿ ರಿವೀಲ್? 5 ಪುಟ, 11 ಪ್ಯಾರಾ ಹೇಳಿಕೆ ಕೊಟ್ಟ ಯಶಸ್!
Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಯಶಸ್ ಸೂರ್ಯ ಹೇಳಿಕೆಯಲ್ಲಿ ರಿವೀಲ್ ಆಯ್ತಾ ಈ ಸಂಗತಿ? ಪಾರ್ಟಿಯ ಎಲ್ಲಾ ಮಾಹಿತಿ ರಿವೀಲ್?
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 13ರಂದು ಚಿಕ್ಕಣ್ಣ ಹಾಗೂ ಯಶಸ್ ಸೂರ್ಯ ಅವರ ಹೇಳಿಕೆ ದಾಖಲು ಪ್ರಕ್ರಿಯೆ ನಡೆದಿದೆ. ಯಶಸ್ ಸೂರ್ಯ ಹೇಳಿಕೆ ದಾಖಲಿಸಿದರೆ ಚಿಕ್ಕಣ್ಣ ಅರ್ಧ ಹೇಳಿಕೆ ದಾಖಲಿಸಿದ್ದರು. ಅವರು ಟೆನ್ಶನ್ ಆಗಿದ್ದ ಕಾರಣ ಇನ್ನೊಂದು ದಿನ ಅವರು ಸಾಕ್ಷಿ ದಾಖಲಿಸಲಿದ್ದಾರೆ.
ನಟ ಯಶಸ್ ಸೂರ್ಯನಿಂದ ಸಾಕ್ಷಿ ಹೇಳಿಕೆ ದಾಖಲು ಮಾಡಲಾಗಿದ್ದು, ಸಾಕ್ಷಿ ವೇಳೆ ನಟ ದರ್ಶನ್ ಜೊತಗಿನ ಒಡನಾಟ ಹಾಗೂ ಪರಿಚಯವಾದ ಸಂದರ್ಭದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹತ್ತು ವರ್ಷಗಳಿಂದ ನಟ ದರ್ಶನ್ ಜೊತೆಗೆ ಸ್ನೇಹವಿರುವ ಬಗ್ಗೆ ಸಾಕ್ಷಿ ನುಡಿದಿದ್ದು, ಚಿಂಗಾರಿ ಸಿನಿಮಾ ವೇಳೆ ನಟ ದರ್ಶನ್ ಪರಿಚಯವಾಗಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ. ಹೀಗೆ ಚಿಂಗಾರಿ, ಕುರುಕ್ಷೇತ್ರ , ಒಡೆಯ, ಗರಡಿ ಸೇರಿದಂತೆ ಚಕ್ರವರ್ತಿ ಚಿತ್ರಗಳಲ್ಲಿ ನಟನೆ ಬಗ್ಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾರ್ಟಿ ಬಗ್ಗೆ ಎಲ್ಲವೂ ರಿವೀಲ್
ದರ್ಶನ್, ಪವಿತ್ರಾಗೌಡ ಸೇರಿ ಕೆಲ ಆರೋಪಿಗಳ ಗುರುತು ಪತ್ತೆ ಮಾಡಿದ್ದಾರೆ. ಸುಮಾರು ಐದು ಪುಟಗಳ ಹನ್ನೊಂದು ಪ್ಯಾರಾ ಹೇಳಿಕೆ ದಾಖಲಿಸಿದ ಯಶಸ್ ಸೂರ್ಯ ಅವರು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ನಡೆದ ಘಟನೆ ಬಗ್ಗೆ ಹಾಗೂ ಪಾರ್ಟಿ ಕುರಿತಾಗಿ ಸಂಪೂರ್ಣ ಹೇಳಿಕೆ ದಾಖಲಿಸಿದ್ದಾರೆ.
ಅತೀ ಶೀಘ್ರದಲ್ಲೆ ನಟ ಚಿಕ್ಕಣ್ಣನಿಗೆ ಸಾಕ್ಷಿ ಹೇಳಿಕೆಗೆ ಸಮನ್ಸ್ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ಸಮನ್ಸ್ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಯಶಸ್ ಕ್ರಾಸ್ ಎಕ್ಸಾಮಿನೇಷನ್
ಯಶಸ್ ಸೂರ್ಯ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಎಸ್ಪಿಪಿ ಅವರು ಕೋರ್ಟ್ಗೆ ಹೇಳಿದ್ದು ಯಶಸ್ ಭಾಗಶಃ ಹಾಸ್ಟೈಲ್ ಆಗಿದ್ದಾರೆ ಅಂತ ಜಡ್ಜ್ ಗೆ ಹೇಳಿದ್ದಾರೆ. ಕ್ರಾಸ್ ಎಕ್ಸಾಮಿನ್ ಗೆ ಕೋರ್ಟ್ ಅವಕಾಶ ಕೊಟ್ಟಿದ್ದು ಯಶಸ್ ಸೂರ್ಯ ಕ್ರಾಸ್ ಎಕ್ಸಾಮಿನ್ ಗೆ ಎಸ್ಪಿಪಿ ಸಮಯಾವಕಾಶ ಕೋರಿದ್ದಾರೆ.
ಇದೇ ವೇಳೆ ಯಶಸ್ ನ 164 ಸ್ಟೇಟ್ಮೆಂಟ್ ಬಗ್ಗೆ ಪ್ರಸ್ತಾಪಿಸಿದ್ದ ಎಸ್ ಪಿಪಿ ಅವರು ಸ್ಟೇಟ್ ಮೆಂಟ್ ಗೂ ಹಾಗೂ ಸಾಕ್ಷಿ ಹೇಳಿಕೆಯಲ್ಲಿ ವ್ಯತ್ಯಾಸ ಇದೆ ಎಂದಿದ್ದಾರೆ. ಹೀಗಾಗಿ ಹಾಸ್ಟೈಲ್ ವಿಟ್ನೆಸ್ ಎಂದು ಪರಿಗಣಿಸಿಬೇಕೆಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಸದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿರೋ ಯಶಸ್ ಸೂರ್ಯ ಹೇಳಿಕೆ ಮುಂದೇನಾಗಲಿದೆ ಎನ್ನುವ ಕುತೂಹಲ ಮೂಡುವಂತೆ ಮಾಡಿದೆ.

