Sting Operation: 2 new points to note in H.D.Kumaraswamy’s allegations..? – Karnataka Sting Operation : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಭಾರೀ ಸದ್ದನ್ನು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಕ್ಲಿಪ್ಪಿಂಗ್’ಗಳು ಹರಿದಾಡುತ್ತಿದೆ. ಈ ನಡುವೆ, ಜೆಡಿಎಸ್ ಸಾಮಾಜಿಕ ಜಾಲತಾಣದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೆಚ್. ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಹೆಚ್. ಡಿ.ಕುಮಾರಸ್ವಾಮಿ, ಮಾಡಿರುವ ಆರೋಪದಲ್ಲಿ ಗಮನಿಸಬೇಕಾದ ಅಂಶಗಳು ಯಾವುದು?
- ಸಿಬಿಐ ತನಿಖೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗ್ರಹ : ಅಮಿತ್ ಶಾ ಭೇಟಿಯಾಗಲು ನಿರ್ಧಾರ.
- ತಮ್ಮ ವಿರುದ್ಧ ಷಡ್ಯಂತ್ರ್ಯದ ವಿರುದ್ಧ ಸಿದ್ದರಾಮಯ್ಯ ಗಟ್ಟಿ ದನಿ ಎತ್ತಲಿ ಎಂದ ಕೇಂದ್ರ ಸಚಿವ ಕುಮಾರಸ್ವಾಮಿ.
- ರಾಜಕೀಯ ವಿರೋಧಿಗಳು, ಶಾಸಕರು, ಸಚಿವರ ವಿರುದ್ಧ ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಸೆಂಟರ್.
![]()
ಬೆಂಗಳೂರು: ಅ:15 ರಂದು ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಗುಮ್ಮ ಭಾರೀ ಸದ್ದನ್ನು ಮಾಡುತ್ತಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ದ ನಿರಂತರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಆರೋಪ ಮಾಡುತ್ತಿರುವುದು ನಾನು, ಇದಕ್ಕೆ ನಮ್ಮ ಹುಡುಗರನ್ನು ಬಂಧಿಸಿದರೆ/ತೊಂದರೆ ಕೊಟ್ಟರೆ ಸುಮ್ಮನೆ ಇರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಬಿಡದಿ, ನೈಸ್ ನಂತರ ಹೆಚ್. ಡಿ.ಕುಮಾರಸ್ವಾಮಿ, ಪ್ರಮುಖವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ದ ವಾಕ್ ಪ್ರಹಾರ ನಡೆಸುತ್ತಿದ್ದಾರೆ. ಈ ನಡುವೆ, ಅವರು ಮಾಡುತ್ತಿರುವ ಆರೋಪಗಳಲ್ಲಿ ಕೆಲವೊಂದು ಹೊಸ ವಿಚಾರಗಳು ಪ್ರಸ್ತಾಪವಾಗಿದೆ ಎಂದು ವಿಶ್ಲೇಷಿಸಿಸಲಾಗುತ್ತಿದೆ. ಬಿಡದಿ, ನೈಸ್ ವಿಚಾರವನ್ನು ಪ್ರಸ್ತಾವಿಸಿದಾಗಲೆಲ್ಲಾ, ಪ್ರಜ್ವಲ್ ರೇವಣ್ಣನ ವಿಷಯ ಯಾಕೆ ಮುನ್ನಲೆಗೆ ಬರುತ್ತಿದೆ ಎಂದು ಹೆಚ್. ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
1. ಸದಾಶಿವನಗರದಲ್ಲಿ ಪೋನ್ ಟ್ರಾಪಿಂಗ್ ನಿಗಾ ಇಡಲು ನಿವೃತ್ತ ಪೊಲೀಸ್ ಅಧಿಕಾರಿಗಳ ನೇಮಕ: ಹಿಂದೆ ಮಾಜಿ ಮುಖ್ಯಮಂತ್ರಿ ಒಬ್ಬರ ವಿರುದ್ಧ ಸ್ಟಿಂಗ್ ಮಾಡಿದರು, ಆಮೇಲೆ ರಮೇಶ್ ಜಾರಕಿಹೊಳಿ ಅವರನ್ನು ಮುಗಿಸಿದರು, ಅದಾದ ಮೇಲೆ ಅದೇ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ತೆಗೆದರು. ನಮ್ಮ ಪಕ್ಷದ ನಾಯಕನೇ ಸಿಡಿ ಫ್ಯಾಕ್ಟರಿ ನಡೆಸುತ್ತಿದ್ದಾನೆ ಎಂದು ರಾಜಣ್ಣ ಹೇಳಿದರೂ ಆಮೇಲೆ ಅವರ ಬಾಯಿ ಮುಚ್ಚಿಸಿದರು ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದ ನಂತರ ಸದಾಶಿವನಗರದ ಮನೆಯಲ್ಲಿ ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು, ಅತ್ಯಾಧುನಿಕ ಉಪಕರಣಗಳ ಮೂಲಕ ಸಚಿವರು ಹಾಗೂ ಇತರರು ಏನು ಚರ್ಚಿಸುತ್ತಾರೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ತಮಗೆ ಬಂದಿದೆ ಎಂದು ಹೆಚ್. ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಆಮೂಲಕ, ರಾಜ್ಯ ರಾಜಕಾರಣದಲ್ಲಿ ಹೊಸ ವಿಷಯವೊಂದನ್ನು ಹೆಚ್.ಡಿ.ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಸದಾಶಿವನಗರದಲ್ಲಿ ನಡೆಸಲಾಗುತ್ತಿರುವ ಫೋನ್ ಟ್ಯಾಪಿಂಗ್, ನಿಗಾ ವ್ಯವಸ್ಥೆಯ ಬಗ್ಗೆ ಪೊಲೀಸ್ ಇಲಾಖೆಯಲ್ಲೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂಬ ಮಾಹಿತಿ ನನಗೆ ಬಂದಿದೆ. ತಮ್ಮ ಸ್ಥಾನ ಭದ್ರ ಮಾಡಿಕೊಳ್ಳಲು ಸ್ವಪಕ್ಷದ ಶಾಸಕರು, ಸಚಿವರ ಮೇಲೆಯೇ ನಿಗಾ ಇಟ್ಟರೆ ಕಥೆ ಏನು? ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ಸಿಬಿಐ ತನಿಖೆ ಅಗತ್ಯವೆಂದರು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
2. ಬಾಲಕಿಯ ಕುರಿತು ಸಲ್ಲಿಕೆಯಾದ ದೂರು ಮತ್ತು ಸ್ಟಿಂಗ್ ಆರೋಪ: ಬೆಂಗಳೂರಿನ ನೈಜ ಹೋರಾಟಗಾರರ ವೇದಿಕೆ ಅಕ್ಟೋಬರ್ 9ರಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ, ಬಾಲ ನ್ಯಾಯಕ್ಕೆ ಸಂಬಂಧಿಸಿದ ಸಮಿತಿ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ ಎಂಬ ಮಾಹಿತಿಯನ್ನು ಹೆಚ್. ಡಿ. ಕುಮಾರಸ್ವಾಮಿ ನೀಡಿದ್ದಾರೆ. ಆ ದೂರಿನಲ್ಲಿ ಹದಿನಾಲ್ಕು ವರ್ಷದ ಬಾಲಕಿ ಬಗ್ಗೆ ಮಾಹಿತಿ ಇದೆ. ಈಗ ಆ ಬಾಲಕಿ ವಯಸ್ಕಳಾಗಿದ್ದು, ಆಕೆಯನ್ನು ಪ್ರೇರೇಪಿಸಿ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂಬ ಆರೋಪವಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಈ ದೂರಿನಲ್ಲಿರುವ ಆರೋಪಗಳೂ ತನಿಖೆಯಿಂದ ಪರಿಶೀಲನೆಯಾಗಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಅಥವಾ ಸರ್ಕಾರ ಕೆಡವಬೇಕು ಎಂದು ತಾನು ಹೇಳುತ್ತಿಲ್ಲ. ಸ್ಟಿಂಗ್ಗಳ ಮೂಲಕ ಜನರನ್ನು ಮತ್ತು ಕುಟುಂಬಗಳನ್ನು ಗುರಿಯಾಗಿಸುವ ಕೆಟ್ಟ ಸಂಸ್ಕೃತಿ ನಿಲ್ಲಬೇಕು ಎಂಬುದಷ್ಟೇ ತಮ್ಮ ಆಶಯ ಎಂದು ಕುಮಾರಸ್ವಾಮಿ, ಒತ್ತಾಯಿಸಿದ್ದರು.
ಸದಾಶಿವನಗರದಲ್ಲಿ ಫೋನ್ ಟ್ಯಾಪಿಂಗ್ ಮತ್ತು ನಿಗಾ ವ್ಯವಸ್ಥೆಯ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
