HD Kumaraswamy: Kumaraswamy deadline for police; Yatnal sat for HDK sitting in front of the commissioner’s office!JDS ಕಾರ್ಯಕರ್ತರನ್ನ ಬಂಧಿಸಿರುವ ವಿಚಾರವಾಗಿ ಹೆಚ್ಡಿಕೆ ಗರಂ ಆಗಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದರ್ಪ ಬೇಡ. ಬಂಧಿಸುವುದಾದ್ರೆ ನನ್ನನ್ನೇ ಬಂಧಿಸಲಿ ಅಂತ ಹೆಚ್ಡಿಕೆ ಹೇಳಿದ್ದಾರೆ.
![]()
ಬೆಂಗಳೂರು ಅ.15: ರಂದು ಸ್ಟಿಂಗ್ ಆಪರೇಷನ್ ಕೋಲಾಹಲ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ನನ್ನನ್ನೇ ಅರೆಸ್ಟ್ ಮಾಡಿ ಅಂತ ಕಮಿಷನರ್ ಕಚೇರಿಗೆ ಬಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಧರಣಿ ಕುಳಿತಿದ್ದಾರೆ. ಸೂಕ್ತ ತನಿಖೆಗೆ ಆಗ್ರಹಿಸಿದ ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರ ಬಂಧನವನ್ನ ಖಂಡಿಸಿದ್ದಾರೆ. ಕುಮಾರಸ್ವಾಮಿ ಧರಣಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಾಥ್ ಕೊಟ್ಟಿದ್ದಾರೆ.
ಕಮಿಷನರ್ ಕಚೇರಿ ಎದುರು ಹೈಡ್ರಾಮಾ: ಇನ್ನು JDS ಕಾರ್ಯಕರ್ತರನ್ನು ಬಂಧಿಸಿರುವ ವಿಚಾರವಾಗಿ ಹೆಚ್ಡಿಕೆ ಗರಂ ಆಗಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದರ್ಪ ಬೇಡ. ಬಂಧಿಸುವುದಾದ್ರೆ ನನ್ನನ್ನೇ ಬಂಧಿಸಲಿ ಅಂತ ಹೆಚ್ಡಿಕೆ ಹೇಳಿದ್ದಾರೆ. ಸುದ್ದಿಗೋಷ್ಟಿ ಮುಗಿಸಿ ನೇರವಾಗಿ ಕಮಿಷನರ್ ಕಚೇರಿಗೆ ಹೆಚ್ಡಿಕೆ ಆಗಮಿಸಿದ್ರು. ಕಮಿಷನರ್ ಕಚೇರಿ ಬಳಿ ಮಾತನಾಡಿದ ಹೆಚ್ಡಿಕೆ, ಸುಮ್ಮನೆ ಕಾರ್ಯಕರ್ತರಿಗೆ ತೊಂದರೆ ಮಾಡೋದು ಬೇಡ ಎಂದಿದ್ದಾರೆ.
ಧರಣಿ ಕುಳಿತ ಕುಮಾರಸ್ವಾಮಿ: ಕಮಿಷನರ್ ಭೇಟಿಯಾಗಿ ಬಂದ ಬಳಿಕ ಮಾತನಾಡಿದ ಹೆಚ್ಡಿಕೆ, ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕ ತನಿಖೆ ಮಾಡ್ತೀವಿ ಅಂತ ಕಮಿಷನರ್ ಹೇಳಿದ್ದಾರೆ. ಅವರ ಪರಿಸ್ಥಿತಿಯೂ ನಮಗೆ ಅರ್ಥ ಆಗುತ್ತೆ. ಏನೇ ಆದ್ರೂ ನಾನು ಹೆದರೋ ಮನುಷ್ಯನೇ ಅಲ್ಲ. ಸ್ಟಿಂಗ್ ಪ್ರಕರಣವನ್ನು ಸಿಬಿಐಗೆ ಕೊಡಲಿ ಇಲ್ಲಾ ನಿವೃತ್ತ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಲಿ. ನಾನು ಕಮಿಷನರ್ ಕಚೇರಿ ಬಳಿಯಲ್ಲೇ ಧರಣಿ ಕೂರುತ್ತೇನೆ ಎಂದಿದ್ದಾರೆ.
2 ದಿನಗಳ ಡೆಡ್ಲೈನ್: ಪೊಲೀಸ್ ಆಯುಕ್ತರು ಸೂಕ್ತ ತನಿಖೆ ಭರವಸೆ ಕೊಟ್ಟಿದ್ದಾರೆ. ಆದ್ರೆ ಸರ್ಕಾರ ಭರವಸೆ ಕೊಟ್ಟಿಲ್ಲ. ಪೊಲೀಸ್ ಆಯುಕ್ತರ ಭರವಸೆ ಮೇರೆಗೆ ಧರಣಿಯಿಂದ ಕೈ ಬಿಟ್ಟಿದ್ದೇನೆ. ಪೊಲೀಸರಿಗೆ 2 ದಿನದ ಗಡುವು ಕೊಡುತ್ತಿದ್ದೇನೆ. ಎರಡು ದಿನದಲ್ಲಿ ತನಿಖೆ ಆಗಿ ಅರೆಸ್ಟ್ ಆಗಬೇಕು.
ಕುಮಾರಸ್ವಾಮಿಗೆ ಯತ್ನಾಳ್ ಸಾಥ್: ನಾನು ಕುಮಾರಸ್ವಾಮಿ ಭೇಟಿಗೆ ಬಂದಿದ್ದೆ. ಅವರ ಹೋರಾಟಕ್ಕೆ ನೈತಿಕ ಬೆಂಬಲ ಕೊಡೋಕೆ ಬಂದಿದ್ದೇನೆ, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಭೇಟಿ ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಆರೋಪಿ ನಂಬರ್ 1 ಇದ್ದಾನಲ್ಲ, ಅವನನ್ನು ಹಿಡಿದ್ರೆ ನಮ್ಮ ರಾಜಕಾರಣ ಸ್ವಚ್ಛತೆ ಆಗುತ್ತೆ. ಎಲ್ಲರ ಸಿಡಿ ಇದೆ ಅಂತ ಹೇಳ್ಕೊಂಡು ಓಡಾಡ್ತಿದ್ದಾರೆ. ಒಬ್ಬ ಸ್ವಾಮಿ ಹೇಳ್ತಾನೆ ಹತ್ತು ವರ್ಷ ಇವನೇ ಸಿಎಂ ಅಂತ ಹಂಗಾದ್ರೆ ಬೆಂಗಳೂರು ಐಟಿ-ಬಿಟಿ, ಸಿಟಿ ಹೋಗಿ ಸಿಡಿ-ಸಿಡಿ ಸಿಟಿ ಆಗುತ್ತೆ ಎಂದು ಯತ್ನಾಳ್ ಏಕವಚನದಲ್ಲೇ ಕಿಡಿಕಾರಿದ್ರು.
