HD Kumaraswamy: JDS social media boss arrested in Siddaramaiah fake video case! Kumaraswamy’s shocking statement – ಮಾಜಿ ಮುಖ್ಯಮಂತ್ರಿ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ ನೈಜ ಅಪರಾಧಿಯನ್ನು ವಶಕ್ಕೆ ಪಡೆಯೋದನ್ನ ಬಿಟ್ಟು ಜೆಡಿಎಸ್ನ ಸೋಶಿಯಲ್ ಮೀಡಿಯಾ ತಂಡದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಂಗಳೂರು ಅ.15 ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಗದ್ದಲ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ನಕಲಿ ವಿಡಿಯೋ ಹರಿಬಿಟ್ಟು ಗೌರವಕ್ಕೆ ಧಕ್ಕೆ ತರೋ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ಐವರನ್ನು ಸಿಸಿಬಿ ಸೈಬರ್ ಕೈಮ್ ಠಾಣೆ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ, ಆ ವಾಹಿನಿಯ ಇಬ್ಬರು ಕೆಲಸಗಾರರು, ಜೆಡಿಎಸ್ ಸೋಶಿಯಲ್ ಮೀಡಿಯಾ ಘಟಕದ ಮುಖ್ಯಸ್ಥ ಶಂಕರ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
JDS ಸೋಶಿಯಲ್ ಮೀಡಿಯಾ ಬಾಸ್ ಅರೆಸ್ಟ್! – ಮಾಜಿ ಸಿಎಂ ಸಿದ್ದರಾಮಯ್ಯ ನಕಲಿ ವಿಡಿಯೋ ವೈರಲ್ ಹಿಂದೆ ಯಾರ ಕೈವಾಡವಿದೆ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗ್ತಿದ್ದಂತೆ ಸೈಬರ್ ಕ್ರೈಮ್ ಪೊಲೀಸರು ಜೆಡಿಎಸ್ ಪಕ್ಷದ ಸೋಶಿಯಲ್ ಮೀಡಿಯಾ ಮುಖ್ಯಸ್ಥರು ಹಾಗೂ ಕೆಲ ಕಾರ್ಯಕರ್ತರನ್ನ ಅರೆಸ್ಟ್ ಮಾಡಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ನಮ್ಮ ಹುಡುಗರಿಗೆ ಕಿರುಕುಳ ಕೊಟ್ರೆ ಸಹಿಸಲ್ಲ- ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವ್ರು, ಮಾಜಿ ಮುಖ್ಯಮಂತ್ರಿ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿದ ನೈಜ ಅಪರಾಧಿಯನ್ನು ವಶಕ್ಕೆ ಪಡೆಯೋದನ್ನ ಬಿಟ್ಟು ಜೆಡಿಎಸ್ನ ಸೋಶಿಯಲ್ ಮೀಡಿಯಾ ತಂಡದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮ ಹುಡುಗರಿಗೆ ತೊಂದ್ರೆ ಕೊಟ್ರೆ ಸಹಿಸಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
‘ನನ್ನ ಕಡೆಗೆ ತಿರುಚುವ ಯತ್ನ ನಡೀತಿದೆ’ – ತನಿಖೆ ನಡೆಸಲಿ ಸತ್ಯಾಸತ್ಯತೆ ಏನು ಅಂತ ಗೊತ್ತಾಗುತ್ತೆ. ಈಗ ಪ್ರಕರಣ ನನ್ನ ಸುತ್ತಲೇ ಸುತ್ತಬೇಕು ಅಲ್ವಾ? ನನ್ನ ಕಡೆಯೇ ಯೂ ಟರ್ನ್ ಮಾಡೋಕೆ ನೋಡ್ತಿದ್ದಾರೆ. ನಮ್ಮ ಕಾರ್ಯಕರ್ತರನ್ನ ಯಾಕೆ ಅರೆಸ್ಟ್ ಮಾಡಿದ್ರು..? ಯಾರನ್ನ ಅರೆಸ್ಟ್ ಮಾಡಬೇಕು..? ಇವ್ರೇ ಹಂಚಿದ್ರು ಅಂತ ಏನ್ ಮಾಹಿತಿ ಇದೆ..? ಸ್ಟಿಂಗ್ ಮಾಡಿದವರನ್ನ ಅರೆಸ್ಟ್ ಮಾಡಬೇಕು.. ನಮ್ಮವರನ್ನ ಯಾಕೆ ಅರೆಸ್ಟ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ರು.
ಪಾಪದ ಕೊಡ ತುಂಬಿದೆ – ಸ್ಟಿಂಗ್ ಹಿಂದಿನ ಮೂಲ ಯಾರು ಅಂತ ಸಿಎಂ ಬಳಿಯೇ ಕೇಳಿ, ಅವ್ರ ಪಾಪದ ಕೊಡ ತುಂಬಿ ಹೋಗಿದೆ. ಎಲ್ಲವೂ ಹೊರಗಡೆ ಬರಬೇಕು. ಸರ್ಕಾರದವರು ಎಂಥವರ ಸಹವಾಸದಲ್ಲಿದ್ದಾರೆ ಎಲ್ಲವೂ ಹೊರಗೆ ಬರಲಿ. ಯಾಕೆ ಅವ್ರು ನಮ್ಮ ಕಾರ್ಯಕರ್ತರನ್ನ ಕರೆದುಕೊಂಡು ಹೋಗಿದ್ರು..? ನಮ್ಮ ಪಾರ್ಟಿಯವರು ಮುಂದಿನ ಚುನಾವಣೆಗೆ ಸಿದ್ಧತೆ ಮಾಡ್ತಿದ್ದಾರೆ.. ಅಂತವರನ್ನ ಅರೆಸ್ಟ್ ಮಾಡುವ ಕೆಲಸ ಮಾಡಿದ್ದಾರೆ ಎಂದು ಹೆಚ್ಡಿಕೆ ಕಿಡಿಕಾರಿದ್ರು.
ಅಧಿಕಾರ ಇದೆ ಅಂತ ನನ್ನ ನಂಬಿರೋ ಕಾರ್ಯಕರ್ತರನ್ನ ಅರೆಸ್ಟ್ ಮಾಡಿದ್ದಾರೆ. ಅದಕ್ಕೆ ಏನು ಅಂತ ವಿಚಾರಿಸಲು ಬಂದೆ. ತನಿಖೆ ಮಾಡಿ ಅಂತ ನಾನು ಹೇಳಿದ್ದೇನೆ. ನನ್ನನ್ನು ಕರೀರಿ. ನಾನು ಮಾಹಿತಿ ಕೊಡ್ತೀನಿ.. ನನ್ನ ಕೇಳಲಿ, ಅದು ಬಿಟ್ಟು ನನ್ನ ಕಾರ್ಯಕರ್ತರ ಬಂಧಿಸಿದ್ದು ಸರಿಯಲ್ಲ ಎಂದ್ರು ಕುಮಾರಸ್ವಾಮಿ.
ಮುಖ್ಯಮಂತ್ರಿಗಳೇ ಈ ಸ್ಟಿಂಗ್ ವಿಚಾರ ತಗೊಂಡ್ ಬಂದಿದ್ದು, ಅವ್ರು ಹೇಳಿದ್ದಕ್ಕೆ ಈ ಎಲ್ಲಾ ವಿಚಾರ ಚರ್ಚೆ ಆಗ್ತಿದೆ. ಮೂಲ ಸಿಎಂ ಹತ್ರವೇ ಇದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ರು.
