Kiccha Sudeep: Priya-Sudeep’s wedding is 25 years old!:ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ 25ನೇ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ವಿಶೇಷ ಪೂಜೆ ಕೂಡ ನಡೆದಿದೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಾಂಪತ್ಯ ಜೀವನಕ್ಕೆ 25 ವರ್ಷ ಆಗಿದೆ. 2001 ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಆಗಿ ಮೂರು ವರ್ಷಕ್ಕೆ ಮಗಳೂ ಸಾನ್ವಿ ಹುಟ್ಟಿದ್ದಾಳೆ. ಈ ಜೋಡಿಯ ಲೈಫ್ ಅಷ್ಟೆ ಸುಂದರವಾಗಿಯೇ ಇದೆ. ಪರಸ್ಪರ ಗೌರವ ಕೊಡ್ತಾನೇ ಇದೀಗ ಬರೋಬ್ಬರಿ-25 ವರ್ಷ ಮುಗಿಸಿದ್ದಾರೆ. 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ಜೋಡಿಯ ‘ಲವ್ಲಿ ಲೈಫ್’ ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚೆಂದದ ಪ್ರೀತಿಗೆ ಸುಂದರ ದಾಂಪತ್ಯ: ಪ್ರಿಯಾ ಸುದೀಪ್ ಹಾಗೂ ಕಿಚ್ಚ ಸುದೀಪ್ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಸುದೀಪ್ ಚಿತ್ರರಂಗದಲ್ಲಿ ಅವಕಾಶ ಹುಡುಕುತ್ತಿದ್ದ ಸಮಯದಲ್ಲಿಯೇ ಇವರ ಲವ್ ಸ್ಟೋರಿ ಶುರು ಆಗಿತ್ತು.


