Bengaluru-Gas Blast: Gas cylinder explodes in house while lighting fire to smoke beedi; 6 seriously injured: ಬೆಂಗಳೂರು ಹೊರವಲಯದ ಆನೇಕಲ್ನ ಶ್ರೀಸಾಯಿ ಆಶೀರ್ವಾದ ಬಡಾವಣೆಯ ಮಂಜುನಾಥ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಆರು ಮಂದಿ ಗ್ಯಾಸ್ ಸ್ಫೋಟದಿಂದ ಗಾಯಗೊಂಡಿದ್ದಾರೆ.
ಬೆಂಗಳೂರು ಅ.19: ಬೆಳ್ಳಂ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಉತ್ತರ ಭಾರತ ಮೂಲದ ಆರು ಮಂದಿವಾಗಿ ಗಂಭೀರ ಗಾಯಗೊಂಡಿದ್ದಾರೆ. ಆನೇಕಲ್ ಪಟ್ಟಣದ ದಿನ್ನೂರು ಶ್ರೀಸಾಯಿ ಆಶೀರ್ವಾದ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಗ್ಯಾಸ್ ಸ್ಫೋಟ, 6 ಮಂದಿಗೆ ಗಾಯ: ಬೆಂಗಳೂರು ಹೊರವಲಯದ ಆನೇಕಲ್ನ ಶ್ರೀಸಾಯಿ ಆಶೀರ್ವಾದ ಬಡಾವಣೆಯ ಮಂಜುನಾಥ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಆರು ಮಂದಿ ಗ್ಯಾಸ್ ಸ್ಫೋಟದಿಂದ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಸಂಜಯ್ ಮತ್ತು ಬೋರೋ, ಮದ್ಯಪ್ರದೇಶದ ದೀರು, ವಿಜಯ್, ಕೋಬಿನ್ ಗಾಯಾಳುಗಳಾಗಿದ್ದಾರೆ.
ಅನಿಲ ಸೋರಿಕೆಯಾಗಿ ಸ್ಪೋಟ: ಬೆಳಗ್ಗೆ 3 ಗಂಟೆ ಸುಮಾರಿಗೆ ಬೀಡಿ ಸೇದಲು ಬೆಂಕಿ ಕಡ್ಡಿ ಹಚ್ಚಿದ್ದಾಗ ಗ್ಯಾಸ್ ಸ್ಪೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಸಿಮೆಂಟ್ ತಗಡಿನ ಶೀಟುಗಳು ಆಕಾಶಕ್ಕೆ ಹಾರಿದೆ. ರಾತ್ರಿ ಆಡುಗೆ ಬಳಿಕ ಗ್ಯಾಸ್ ಸ್ಟೌವ್ ಸ್ವಿಚ್ ಪೂರ್ಣ ಕಡಿತಗೊಳಿಸದ ಹಿನ್ನೆಲೆ ಆಡುಗೆ ಅನಿಲ ಸೋರಿಕೆಯಾಗಿ ಸ್ಪೋಟ ಸಂಭವಿಸಿರುವ ಸಾಧ್ಯತೆ ಇದೆ.
ಸ್ಥಳಕ್ಕೆ ಆನೇಕಲ್ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹಾಗೂ ಆನೇಕಲ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳೆಲ್ಲಾ ಬಿಲ್ಡಿಂಗ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಳು.
