Bengaluru-High Court: Bengaluru Gaadi Anjaneya Swamy temple dispute; Important order of High Court: ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು ವಾದ ಮಂಡಿಸಿದ್ರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಅರ್ಜಿಯನ್ನ ಭಾಗಶಃ ಮಾನ್ಯ ಮಾಡಿದೆ.

ಬೆಂಗಳೂರು ಅ.18: ಮುಜರಾಯಿ ಇಲಾಖೆಯ ಸುಪರ್ದಿಗೆ ನಗರದ ಪ್ರಸಿದ್ದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಒಪ್ಪಿಸಿ 2025ರ ಜುಲೈ 8ರಂದು ರಾಜ್ಯ ಸರ್ಕಾರ ಸರ್ಕಾರ ಹೊರಡಿಸಿದ್ದ ಆದೇಶವನ್ನ ಹೈಕೋರ್ಟ್ ರದ್ದುಪಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ, ದೇವಸ್ಥಾನದ ಟ್ರಸ್ಟ್ ಸಂಚಾಲಕ ಬಿಪಿ ನಾಗರಾಜು ಹಾಗೂ ಇತರ ಟ್ರಸ್ಟಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿಎಂ ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಮುಜರಾಯಿ ಸುಪರ್ದಿಗೆ ಪಡೆದಿದ್ದ ಆದೇಶ ರದ್ದು: ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ಅವರು ವಾದ ಮಂಡಿಸಿದ್ರು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ಅರ್ಜಿಯನ್ನ ಭಾಗಶಃ ಮಾನ್ಯ ಮಾಡಿದೆ. ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆದುಕೊಂಡಿದ್ದ ಆದೇಶದಲ್ಲಿ ಕಾನೂನು ಲೋಪಗಳಿರುವ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ.
ಆಡಳಿತಾಧಿಕಾರಿ ನೇಮಕ ರದ್ದು: ಮೂಲ ಆದೇಶವೇ ರದ್ದಾಗಿರುವುದ್ರಿಂದ, ಆಡಳಿತಾಧಿಕಾರಿಯನ್ನ ನೇಮಕ ಮಾಡಿದ್ದ ಪ್ರಕ್ರಿಯೆಯನ್ನ ದೇವಾಲಯ ಅಸಿಂಧುಗೊಳಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ. ನ್ಯಾಯಾಲಯದ ಆದೇಶ ಪ್ರಕಟಗೊಂಡ ಒಂದು ವಾರದೊಳಗೆ ಆಡಳಿತಾಧಿಕಾರಿಯು ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಬೇಕು. ಆದ್ರೆ, ಪ್ರಕರಣದಲ್ಲಿ ಕೇಳಿ ಬಂದಿರುವ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರವು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮುಕ್ತ ಅವಕಾಶವನ್ನು ಹೈಕೋರ್ಟ್ ನೀಡಿದೆ.
ಟ್ರಸ್ಟ್ನಿಂದ ಹಣ ದುರ್ಬಳಕೆ ಆರೋಪ: ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳ ನಡುವೆ ಸಮನ್ವಯತೆ ಇಲ್ಲದಿರುವುದು, ಲಕ್ಷಾಂತರ ರು. ಆದಾಯವಿದ್ದರೂ ಉಳಿತಾಯವಿಲ್ಲದೆ ವೆಚ್ಚ ಮಾಡುತ್ತಿರುವುದು ಹಾಗೂ ಹಣ ದುರ್ಬಳಕೆ ಆರೋಪ ಕೇಳಿ ಬಂದಿದ್ದವು. ಅಲ್ಲದೇ, ಕಳೆದ 25 ವರ್ಷಗಳಿಂದ ಸರಿಯಾಗಿ ದಾಖಲೆ ನಿರ್ವಹಣೆ ಮಾಡಿಲ್ಲ ಎಂಬ ಕಾರಣಕ್ಕೆ 2025ರ ಜು.8ಕ್ಕೆ ಸರ್ಕಾರ ದೇಗುಲವನ್ನು ವಶಪಡಿಸಿಕೊಂಡಿತ್ತು.
ಅಲ್ಲದೇ ಹಣ ಕಳ್ಳತನ ಮಾಡ್ತಿರೋ ವಿಡಿಯೋ ಒಂದು ವೈರಲ್ ಆಗಿತ್ತು. ಹೀಗಾಗಿ ಆಡಳಿತಾಧಿಕಾರಿಯನ್ನ ನೇಮಿಸಿ ದೇವಸ್ಥಾನ ಸುಪರ್ದಿಗೆ ಪಡೆದಿದ್ದ ಸರ್ಕಾರದ ಆದೇಶ ಪ್ರಶ್ನಿಸಿ ಟ್ರಸ್ಟಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ-ಪ್ರತಿವಾದ ಆಲಿಸಿ ಸರ್ಕಾರದ ಆದೇಶ ಹೈಕೋರ್ಟ್ ರದ್ದುಗೊಳಿಸಿದೆ. ಆದೇಶದಲ್ಲಿ ಹಲವು ನೂನ್ಯತೆ ಹಿನ್ನೆಲೆ ಸರ್ಕಾರದ ಆದೇಶ ರದ್ದು ಪಡಿಸಿ, ಒಂದು ವಾರದಲ್ಲಿ ದೇವಸ್ಥಾನದ ಆಡಳಿತ ಒಪ್ಪಿಸಲು ಸೂಚನೆ ನೀಡಿದ್ರು. ನ್ಯಾಯಮೂರ್ತಿ ಸಿಎಂ ಪೊಣಚ್ಚ ಅವರ ಏಕಸದಸ್ಯ ಪೀಠದಿಂದ ಆದೇಶ ಹೊರಡಿಸಿದೆ.
