Koragajja Movie: “Koragajja” cinema silent film at Mysore Jumbo Savari! – ಮೈಸೂರು ದಸರಾ ಅಂಬಾರಿ ಸಮೀಪದಲ್ಲಿಯೇ ಕೊರಗಜ್ಜ ಚಿತ್ರದ ಸ್ತಬ್ಧ ಚಿತ್ರ ಸಾಗಿ ಬಂದಿದೆ. ಸಿನಿಮಾ ಒಂದರ ಸ್ತಬ್ಧ ಚಿತ್ರ ಸಾಗಿ ಬಂದಿರೋದು ಇಲ್ಲಿ ವಿಶೇಷವಾಗಿಯೇ ಕಾಣಿಸಿದೆ. ಇದರ ಇತರ ವಿವರ ಇಲ್ಲಿದೆ ಓದಿ.
ಮೈಸೂರು ದಸರಾ ಹಬ್ಬ ಈ ವರ್ಷ ತುಂಬಾನೆ ವಿಶೇಷಾಗಿತ್ತು. ಕನ್ನಡ ಚಿತ್ರರಂಗದ ತಾರೆಯರೆಲ್ಲ ಒಟ್ಟಿಗೆ ಬಂದಿದ್ದರು. ಓಪನ್ ಬಸ್ ಅಲ್ಲಿ ಸಾಗಿ ಬಂದ ಈ ಕಲಾವಿದರನ್ನ ನೋಡಿ ಜನ ತುಂಬಾನೆ ಖುಷಿಪಟ್ಟರು. ಆದರೆ, ಇಲ್ಲಿ ಇನ್ನೂ ಒಂದು ವಿಶೇಷ ಕೂಡ ಇತ್ತು. ಅಂಬಾರಿ ಸಮೀಪವೇ “ಕೊರಗಜ್ಜ”ನ ಸ್ತಬ್ಧ ಚಿತ್ರವು ಸಾಗಿ ಬಂದಿದೆ. ಫಸ್ಟ್ ಟೈಮ್ ಸಿನಿಮಾ ಒಂದರ ಪಾತ್ರದ ಟ್ಯಾಬ್ಲೋವು ಇಲ್ಲಿ ಪ್ರದರ್ಶನ ಆಗಿರೋದು ವಿಶೇಷವಾಗಿಯೇ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ.
ಕೊರಗಜ್ಜ ಚಿತ್ರದ ಸ್ತಬ್ಧ ಚಿತ್ರ : ಕೊರಗಜ್ಜ ಚಿತ್ರದ ವಿಶೇಷವಾಗಿಯೇ ಇದೆ. ಈ ಚಿತ್ರದಲ್ಲಿ ಕೊರಗಜ್ಜನ ಕಥೆ ಇದೆ. ಬಾಲಿವುಡ್ ನಟ ಕಬೀರ್ ಬೇಡಿ ಕೂಡ ಇದ್ದಾರೆ. ನಟಿ ಭವ್ಯ ಕೂಡ ನಟಿಸಿದ್ದಾರೆ.

ಡೈರೆಕ್ಟರ್ ಸುಧೀರ್ ಅತ್ತಾವರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದ ಕೊರಗಜ್ಜನ ಪಾತ್ರವೂ ಇಲ್ಲಿ ಪ್ರಮುಖವಾಗಿಯೇ ಇದೆ.
ಮೈಸೂರು ದಸರಾದಲ್ಲಿ…! ಕೊರಗಜ್ಜನ ಸ್ತಬ್ಧ ಚಿತ್ರ ಮೈಸೂರು ದಸರಾದಲ್ಲಿ ಪ್ರದರ್ಶನ ಆಗಿದೆ. ಫಸ್ಟ್ ಟೈಮ್ ಚಿತ್ರ ಒಂದರ ಪಾತ್ರ ಸ್ತಬ್ಧ ಚಿತ್ರ ಪ್ರದರ್ಶನ ಆಗಿದೆ.
ಇದು ಅಂಬಾರಿಯ ಸಮೀಪದಲ್ಲಿಯೇ ಇದು ಸಾಗಿ ಬಂದಿದೆ. ಈ ಒಂದು ವಿಷಯವನ್ನ ಚಿತ್ರ ತಂಡವೇ ಹಂಚಿಕೊಂಡಿದೆ. ಈ ಬೃಹತ್ ಸ್ತಬ್ಧ ಚಿತ್ರದ ಮುಂದೆ ಫೋಟೋ ತೆಗೆಸಿಕೊಂಡಿರೋದು ಇದೆ. ಈ ಫೋಟೋಗಳನ್ನು ಮಾಧ್ಯಮಗಳಿಗೂ ಚಿತ್ರ ತಂಡ ಹಂಚಿಕೊಂಡಿದ್ದಾರೆ.
ಲರ್ ಲಾಂಚ್ – ಕೊರಗಜ್ಜ ಚಿತ್ರದ ಟ್ರೈಲರ್ ಲಾಂಚ್ ಕೂಡ ಆಗಿದೆ. ಸ್ತಬ್ಧ ಚಿತ್ರ ಅಂಬಾರಿಯ ಸಮೀಪವೇ ಸಾಗಿ ಬಂದಿದೆ. ಕೊನೆಗೆ ಬನ್ನಿ ಮಂಟಪದ ಬಳಿ ಚಿತ್ರದ ಟ್ರೈಲರ್ ಕೂಡ ಲಾಂಚ್ ಆಗಿದೆ.
ಈ ಸಮಯದಲ್ಲಿ ಚಿತ್ರ ತಂಡದ ಬಹುತೇಕ ಸದಸ್ಯರು ಹಾಜರಿದ್ದರು. ಕಲಾವಿದರಾದ ಕಬೀರ್ ಬೇಡಿ, ಮಿನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ-ಎಡಿಟರ್ ವಿದ್ಯಾಧರ್ ಶೆಟ್ಟಿ ಸೇರಿದಂತೆ ಇನ್ನು ಹಲವರು ಇಲ್ಲಿದ್ದರು.

ತಾರೆಯರ ಸಮಾಗಮ – ಈ ವರ್ಷದ ಮೈಸೂರು ದಸರಾ ನಿಜಕ್ಕೂ ವಿಶೇಷವಾಗಿತ್ತು. ಇಡೀ ಕನ್ನಡ ಇಂಡಸ್ಟ್ರಿ ಇಲ್ಲಿಗೆ ಆಗಮಿಸಿತ್ತು. ಕ್ರೇಜಿ ಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಧನಂಜಯ್, ಪ್ರೇಮದ ಊರಲಿ ಚಿತ್ರದ ನಾಯಕ ನಟ ಶ್ರೀರಾಮ್, ನಾಯಕಿ ತಪಸ್ವಿನಿ ಪೂಣಚ್ಚ ಆಗಮಿಸಿದ್ದರು.
ಹಾಸ್ಯ ನಾಯಕ ನಟ ಶರಣ್, ನೆನಪಿರಲಿ ಪ್ರೇಮ್, ರಮೇಶ್ ಅರವಿಂದ್ ಸಹ ಆಗಮಿಸಿದರು. ಹಿರಿಯ ನಟರಾದ ದೊಡ್ಡಣ್ಣ, ಸುಂದರ್ ರಾಜ್, ಮುಖ್ಯಮಂತ್ರಿ ಚಂದ್ರು ಆಗಮಿಸಿದ್ದರು.
ನಟಿಯರಾದ ಹೇಮಾ ಚೌದ್ರಿ, ಜಯಮಾಲಾ, ಪೂಜಾ ಗಾಂಧಿ, ಸೋನಲ್ ಮೊಂತೆರೋ ಸೇರಿದಂತೆ ಇನ್ನೂ ಹಲವು ಕಲಾವಿದರು ಇಲ್ಲಿಗೆ ಆಗಮಿಸಿದ್ದರು. ಓಪನ್ ಬಸ್ ಅಲ್ಲಿ ಇವರೂ ಸಾಗಿ ಬಂದರು ಅಂತಲೇ ಹೇಳಬಹುದು.
