‘Hey, I’m the Cultural Minister’ – Police stop Mysore Dasara Jambu Savari flower procession! 3 ministers parade – ಮೈಸೂರು ದಸರಾ ಜಂಬೂಸವಾರಿ ವೇದಿಕೆಗೆ ತೆರಳುತ್ತಿದ್ದ ಸಚಿವರಾದ ಶಿವರಾಜ ತಂಗಡಗಿ, ಕೆ.ಎಸ್. ಬಸವಂತಪ್ಪ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಅವರನ್ನು ಐಪಿಎಸ್ ಪೊಲೀಸ್ ಅಧಿಕಾರಿಯೊಬ್ಬರು ಅಡ್ಡಗಟ್ಟಿ ತಡೆದಿದ್ದಾರೆ. ಇದರಿಂದ ಗರಂ ಆದ ಸಚಿವ ತಂಗಡಗಿ, “ನಾನು ಕಲ್ಚರಲ್ ಮಿನಿಸ್ಟರಪ್ಪಾ ಬಿಡಪ್ಪ” ಎಂದು ಆಕ್ರೋಶ ಹೊರಹಾಕಿ ಮುಂದೆ ಸಾಗಿದರು. ಸಿಎಂ ಸೂಚನೆ ಬಳಿಕ ಸಚಿವರನ್ನು ಬಿಡಲಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
- ಮೈಸೂರು ದಸರಾದಲ್ಲಿ ರಾಜ್ಯ ಸರ್ಕಾರದ ಮೂವರು ಸಚಿವರು ಪರದಾಡಿದ ಘಟನೆ.
- ಶಿವರಾಜ ತಂಗಡಗಿ ಕೂಡಲೇ ನಾನು ಕಲ್ಚರಲ್ ಮಿನಿಸ್ಟರಪ್ಪಾ ಬಿಡಪಾ ಎಂದು ಪೊಲೀಸ್ ಮೇಲೆ ಗರಂ.
- ಚಿವ ಕೆಎಸ್ ಬಸವಂತಪ್ಪ ಹಾಗೂ ಕೃಷಿ ಸಚಿವ ಪಿಎಂ ನರೇಂದ್ರ ಸ್ವಾಮಿಗೂ ಬಿಡದ ಪೊಲೀಸರು.

ಗರಂ ಆದ ಸಚಿವರುಗಳು! : ಪೊಲೀಸ್ ಅಧಿಕಾರಿ ಅಡ್ಡಗಟ್ಟಿದ ಕೂಡಲೇ ಶಿವರಾಜ ತಂಗಡಗಿ “ನಾನು ಕಲ್ಚರಲ್ ಮಿನಿಸ್ಟರಪ್ಪಾ” ಎಂದು ಕೈ ಸರಿಸಿ ಮುಂದೆ ಹೋದರು. ಆ ಬಳಿಕ ಸಚಿವ ಬಸವಂತಪ್ಪ, ನರೇಂದ್ರ ಸ್ವಾಮಿಯವರನ್ನು ಅಡ್ಡ ಹಾಕಿದರು. ಕೂಡಲೇ ಸಿಎಂ ತಿರುಗಿ ಸೂಚನೆ ನೀಡುತ್ತಿದ್ದಂತೆ ಪೊಲೀಸರು ಸುಮ್ಮನಾದರು. ಅಧಿಕಾರಿಯ ಮುಖವನ್ನೇ ದಿಟ್ಟಿಸಿ ನೋಡುತ್ತಾ ಸಚಿವರು ಮುಂದೆ ಸಾಗಿದರು.
