Bengaluru: Twist in Pulakeshinagara mysterious explosion case! Police Commissioner gives important information about the incident! – ಪುಲಿಕೇಶಿನಗರ ಬ್ಲಾಸ್ಟ್ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ರಾಜ್ಯದೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದ್ರೆ, ನಿನ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದೆ. ಪುಲಿಕೇಶಿನಗರದಲ್ಲಿ ಅನುಮಾನಸ್ಪದ ವಸ್ತು ಸ್ಫೋಟದಿಂದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು, ಈ ಘಟನೆ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಪೊಲೀಸ್ ಕಮಿಷನರ್ ಹೇಳಿದ್ದೇನು? : ಪುಲಿಕೇಶಿನಗರ ಬ್ಲಾಸ್ಟ್ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಮಧ್ಯಾಹ್ನ ಒಂದು ಬ್ಲಾಸ್ಟ್ ಆಗಿದೆ ಅಂತ ಮಾಹಿತಿ ಬಂತು. ಆರಂಭದಲ್ಲಿ ಬ್ಯಾಟರಿ ಬ್ಲಾಸ್ಟ್ ಆಗಿದೆ ಅಂತ ಮಾಹಿತಿ ಬಂತು. ಡಿಟೇಲ್ಸ್ ಗೊತ್ತಾದ್ಮೇಲೆ ಸ್ಥಳಕ್ಕೆ ಎಟಿಎಸ್, ಎಫ್ಎಸ್ಎಲ್ ಚೆಕ್ ಮಾಡಿದ್ದಾರೆ. ಕೆಲವು ಐಟಮ್ಸ್ ಸೀಜ್ ಮಾಡಿದ್ದೇವೆ, ಎಫ್ಎಸ್ಎಲ್ಗೆ ಕಳುಹಿಸಿದ್ದೇವೆ ಎಂದು ಹೇಳಿದ್ರು.
‘ಯಾವುದೇ ಪಾರ್ಸೆಲ್ ಬಂದಿಲ್ಲ’ : ಮುಂದುವರೆದು ಮಾತನಾಡಿದ ಅವರು, ಕಟ್ಟಡದ 5ನೇ ಫ್ಲೋರ್ನಲ್ಲಿ ಕಾಮಗಾರಿ ನಡೆಯುತ್ತಿತ್ತು. , ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಒಬ್ಬ ಗಾಯಾಳು ಡಿಸ್ಚಾರ್ಜ್ ಆಗಿದ್ದಾನೆ. ಮೇಲ್ನೋಟಕ್ಕೆ ಒಂದು ಬ್ಯಾಟರಿ ಆನ್ ಮಾಡೋಕೆ ಹೋದಾಗ ಬ್ಲಾಸ್ಟ್ ಆಗಿದೆ ಅಂತ ಗೊತ್ತಾಗಿದೆ. ಕಟ್ಟಡ ಮಾಲೀಕನನ್ನೂ ಕೂಡ ವಿಚಾರಣೆ ಮಾಡಲಾಗಿದೆ. ಬ್ಲಾಸ್ಟ್ ಆಗುವಾಗ ಇಬ್ಬರು ವ್ಯಕ್ತಿಗಳು ಇದ್ದರು. ಅವರು ಯಾಕೆ ಬೇರೆಯವರ ಗಮನಕ್ಕೆ ತಂದಿಲ್ಲ ಅಂತ ನೋಡ್ತಿದ್ದೀವಿ, ಬ್ಲಾಸ್ಟ್ ಆಗಿರೋದು ನಿಜ ಯಾಕೆ ಬ್ಲಾಸ್ಟ್ ಆಗಿದೆ ಅನ್ನೋ ರಿಪೋರ್ಟ್ ಬರಬೇಕು. ಯಾವುದೇ ಪಾರ್ಸಲ್ ಬಂದಿಲ್ಲ ಬ್ಯಾಟರಿ ಇದ್ದದ್ದು ಬ್ಲಾಸ್ಟ್ ಆಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಅವರು ಮಾಹಿತಿ ನೀಡಿದ್ರು.
ಇನ್ನು, ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುಲಕೇಶಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಬಿಎನ್ಎಸ್ 61, 3(5)BNS ಮತ್ತು ಸ್ಫೋಟಕ ವಸ್ತುಗಳ ಕಾಯ್ದೆ 3,5 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಿಎನ್ಎಸ್ ಸೆಕ್ಷನ್ 61- ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳು ಸೇರಿ ಅಪರಾಧಿಕ ಸಂಚು ರೂಪಿಸುವುದು. ಬಿಎನ್ಎಸ್ ಸೆಕ್ಷನ್ 3(5)- ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಸೇರಿಕೊಂಡು ಅಪರಾಧ ಕೃತ್ಯ ಎಸಗುವುದು.
ಸ್ಫೋಟಕ ವಸ್ತುಗಳ ಕಾಯ್ದೆ ಸೆಕ್ಷನ್ 3 ಮತ್ತು 5
- ಸೆಕ್ಷನ್ 3- ಸ್ಫೋಟಕ ವಸ್ತುಗಳ ಮೂಲಕ ಜೀವ ಅಥವಾ ಆಸ್ತಿಗೆ ಹಾನಿ ಉಂಟು ಮಾಡುವುದು.
- ಸೆಕ್ಷನ್ 5- ಯಾವುದೇ ಪರವಾನಗಿ ಇಲ್ಲದೆ ಅನುಮಾನಸ್ಪದ ವಸ್ತು ಅಥವಾ ಸ್ಫೋಟಕ ವಸ್ತುಗಳ ತಯಾರಿ ಅಥವಾ ಸಂಗ್ರಹಿಸುವುದು.
ಸದ್ಯ, ಪೊಲೀಸರು ಎಫ್ಐಆರ್ ದಾಖಲಿಸಿ ಸ್ಫೋಟ ಸಂಬಂಧ ತನಿಖೆ ಮುಂದುವರಿಸಿದ್ದಾರೆ. ಈಗಾಗಲೇ ಎಫ್ಎಸ್ಎಲ್ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಫೋಟದ ಸ್ಯಾಂಪಲ್ ಸಂಗ್ರಹಿಸಿದ್ದು, ಎಟಿಸಿ ತಂಡದಿಂದಲೂ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಪ್ರಕರಣ ಭೇದಿಸಲು ವಿಶೇಷ ತಂಡಗಳ ರಚನೆ ಮಾಡಲಾಗಿದ್ದು, ಸ್ಫೋಟಗೊಂಡ ಸಾಮಗ್ರಿ ಬಗ್ಗೆ ತೀವ್ರ ತನಿಖೆ ಮುಂದುವರೆದಿದೆ.
