Sting Operation: ‘Sting’ riot in the state! JDS worker’s house raided, pen drive seized! – ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಕೇಸ್ ಸಂಬಂಧ ಸೈಬರ್ ಕ್ರೈಮ್ ಪೊಲೀಸರು, ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಸ್ಟಿಂಗ್ ರಾದ್ಧಾಂತ ಈಗಾಗ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ದಸರಾ, ವಿಜಯದಶಮಿ ಪ್ರಯುಕ್ತ ಕೊಂಚ ತಣ್ಣಗಾಗಿದ್ದ ಈ ವಿಚಾರ ಇದೀಗ ಮತ್ತೆ ಸ್ಫೋಟಗೊಂಡಿದೆ. ಇದೇ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿಬಿಟ್ಟಿದ್ದಾರೆ. ಬಿಜೆಪಿ ನಾಯಕರೂ ಕೂಡ ಹೋದಲ್ಲಿ ಬಂದಲ್ಲಿ ಇದೇ ವಿಚಾರ ಚರ್ಚೆ ಮಾಡ್ತಿದ್ದಾರೆ. ಇದು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿಬಿಟ್ಟಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ ಪ್ರಕರಣ ಸಂಬಂಧ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದೆ. ದೆಹಲಿ ಮೂಲದ ವ್ಯಕ್ತಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಿತೇಶ್ ಪಾಂಡೆ ಎಂಬಾತನನ್ನ ಬಂಧಿಸಿದ್ದು, ಆರೋಪಿ ಸ್ಟಿಂಗ್ ಮಾಡಲೆಂದೆ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸಿದ್ದ ಎಂದ ಆರೋಪಿಸಲಾಗಿದೆ. ಸದ್ಯ ಆರೋಪಿಯನ್ನ ಬೆಂಗಳೂರಿಗೆ ಕರೆತಂದಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸ್ತಿದ್ದಾರೆ.
ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್! : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ನೋಟಿಸ್ ನೀಡಲಾಗಿದೆ. ಮೋಹನ್ ಗೌಡ ಹಾಗೂ ಚಂದನ್ ಎಂಬ ಇಬ್ಬರಿಗೆ ನೋಟಿಸ್ ನೀಡಲಾಗಿದೆ. ಜೆಡಿಎಸ್ ವಾರ್ ರೂಂನಲ್ಲಿ ಕೆಲಸ ಮಾಡ್ತಿದ್ದ ಮೋಹನ್ ಗೌಡಗೆ ಪೊಲೀಸರು ಈಗಾಗಲೇ ಎರಡ್ಮೂರು ಬಾರಿ ನೋಟಿಸ್ ನೀಡಿದ್ದಾರೆ. ಆದ್ರೆ, ವಿಚಾರಣೆಗೆ ಹಾಜರಾಗದೆ ಮೋಹನ್ ಗೌಡ ತಲೆಮರಿಸಿಕೊಂಡಿದ್ದು, ಸದ್ಯ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ದಾಳಿ ವೇಳೆ ಕೆಲ ಪೆನ್ ಡ್ರೈವ್ ಗಳು ಸೀಜ್ : ಇನ್ನು, ಸಿದ್ದರಾಮಯ್ಯ ಸ್ಟಿಂಗ್ ಕೇಸ್ ಸಂಬಂಧ ಸೈಬರ್ ಕ್ರೈಮ್ ಪೊಲೀಸರು, ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬ್ಯಾಡರಹಳ್ಳಿಯಲ್ಲಿರುವ ಮೋಹನ್ ಗೌಡ ಮನೆ ಮೇಲೆ ನಿನ್ನೆ ಸಂಜೆ ಸೈಬರ್ ಕ್ರೈಮ್ ಪೊಲೀಸರು ದಾಳಿ ನಡೆಸಿದ್ದು, ದಾಳಿ ವೇಳೆ ಕೆಲ ಪೆನ್ ಡ್ರೈವ್ಗಳು ಸೀಜ್ ಮಾಡಲಾಗಿದೆ.
ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮ : ದಾಳಿ ವೇಳೆ ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮ ನಡೆದಿದೆ ಎನ್ನಲಾಗಿದೆ. ಮೋಹನ್ ಗೌಡ ತಲೆ ಮರೆಸಿಕೊಂಡಿದ್ದು, ಮನೆಯಲ್ಲಿ ಮೋಹನ್ ಪತ್ನಿ ಮಾತ್ರ ಇದ್ರು, ಪೊಲೀಸರ ದಾಳಿ ವೇಳೆ ಮೋಹನ್ ಪತ್ನಿ ವಿರೋಧ ವ್ಯಕ್ತಪಡಿಸಿದ್ದಾರೆ. ಪೊಲೀಸ್ರ ಜೊತೆಗೆ ಕೈ ಕೈ ಮಿಲಾಯಿಸೋ ಹಂತಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಕೋರ್ಟ್ ಅನುಮತಿ ಪಡೆದು ಮೋಹನ್ ಗೌಡ ಮನೆ ಮೇಲೆ ದಾಳಿ ನಡೆಸಿದ್ದಾರೆ.
‘ಜೆಡಿಎಸ್ ಮೇಲೆ ಆಪಾದನೆ ಹೊರಿಸಲು ಕುತಂತ್ರ’ : ಸ್ಟಿಂಗ್ ವಿಚಾರವಾಗಿ ಹಾಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸ್ಟಿಂಗ್ ವಿಚಾರವಾಗಿ ತನಿಖೆ ಆಗಲಿ ಅಂತ ಸಿದ್ದರಾಮಯ್ಯನವರು ಹೇಳಿದ್ದಾರೆ. ಸ್ಟಿಂಗ್ ವಿಚಾರ ಹೊರಗೆ ಬಂದಾಗಿನಿಂದ ಗೃಹಸಚಿವರು ನಮ್ಮ ಪಕ್ಷದ ಕಾರ್ಯಕರ್ತರ ಸುತ್ತಲೇ ಸುತ್ತುತ್ತಿದ್ದಾರೆ. ಕುಮಾರಸ್ವಾಮಿಯ ಬಗ್ಗೆ ಅನುಮಾನ ಬರುವ ರೀತಿಯಲ್ಲಿ ವ್ಯವಸ್ಥಿತವಾಗಿ ತನಿಖೆ ನಡೆಯುತ್ತಿದೆ. 2023ರಲ್ಲಿ ಯಾವ ಕಾರಣಕ್ಕೆ ಸ್ಟಿಂಗ್ ಮಾಡಿದ್ರು ಅದರ ಬಗ್ಗೆ ತನಿಖೆ ಆಗ್ತಿಲ್ಲ. ಆದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಚ್ ವಾರೆಂಟ್ ಕೊಟ್ಟು ಬೆದರಿಕೆ ಹಾಕಲಾಗ್ತಿದೆ. ಈ ಹಗರಣ ನಮ್ಮ ಪಕ್ಷದವರೇ ಮಾಡಿದ್ದಾರೆಂದು ಬಿಂಬಿಸಲಾಗ್ತಿದೆ. ಇದನ್ನೆಲ್ಲಾ ನಾನು ನಮ್ಮ ಪಕ್ಷದ ಕಾರ್ಯಕರ್ತರು ಎದುರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.
