The much-awaited song “Gaganada Nesara” from the film “Father” has been unveiled, Karunadu is nodding its head to this song that celebrates the bond between father and son. – ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ನಿರ್ಮಾಣ ಸಂಸ್ಥೆಯನ್ನು ಆರ್ ಚಂದ್ರು ಆರಂಭಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ “ಫಾದರ್” ನಿರ್ಮಾಣವಾಗಿದೆ. ಆನಂದ್ ಪಂಡಿತ್ ಅರ್ಪಿಸುವ ಈ ಚಿತ್ರವನ್ನು ಯಮುನಾ ಚಂದ್ರು ನಿರ್ಮಾಣ ಮಾಡಿದ್ದಾರೆ. ರಾಜಾಮೋಹನ್ ನಿರ್ದೇಶಿಸಿರುವ ಈ ಚಿತ್ರದ ಪ್ರಮುಖಪಾತ್ರಗಳಲ್ಲಿ ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ನಾಯಕಿಯಾಗಿ ಅಮೃತ ಅಯ್ಯಂಗಾರ್ ನಟಿಸಿದ್ದಾರೆ. ನಾಗಭೂಷಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರದ “ಗಗನದ ನೇಸರ” ಎಂಬ ಅಪ್ಪ – ಮಗನ ಬಾಂಧವ್ಯ ಸಾರುವ ಸುಮಧುರ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಮಂಜುನಾಥ್ ಮಾಗೋದಿ ಅವರು ಬರೆದಿರುವ, ವಿಜಯ್ ಪ್ರಕಾಶ್ ಹಾಡಿರುವ ಹಾಗೂ ನಕುಲ್ ಅಭಯಂಕರ್ ಸಂಗೀತ ನೀಡಿರುವ ಈ ಹಾಡನ್ನು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಬಿಡುಗಡೆ ಮಾಡಿದರು. ನಿರ್ಮಾಪಕ ಉದಯ್ ಕೆ ಮೆಹ್ತಾ, ಮಾಧವ್ ಕಿರಣ್, ಅನೂಪ್ ರೇವಣ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸರಿಗಮ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿನ ಬಗ್ಗೆ ಗಣ್ಯರು ಮೆಚ್ಚುಗೆಯ ಮಾತುಗಳಾಡಿದರು. ನಂತರ ಚಿತ್ರತಂಡದ ಸದಸ್ಯರು ಹಾಡು ಹಾಗೂ ಚಿತ್ರದ ಕುರಿತು ಮಾತನಾಡಿದರು. ಡಿಸೆಂಬರ್ 4 ರಂದು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ನಮ್ಮ ಚಿತ್ರದ “ಫಾದರ್” ನಿರ್ದೇಶಕ ರಾಜಾಮೋಹನ್. ಒಂದು ಮನಮುಟ್ಟುವ ಕಥೆಯನ್ನು ಅವರು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರವನ್ನು ಎ.ಆರ್ ರೆಹಮಾನ್ ಸ್ಟುಡಿಯೋದಲ್ಲಿ ನನಗೆ ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ತೋರಿಸಿದರು. ಚಿತ್ರ ನೋಡಿದ ಮೇಲೆ ಕಣ್ಣಂಚಲಿ ನೀರು ಬಂತು . ತಕ್ಷಣ ನಮ್ಮ ಅಪ್ಪನಿಗೆ ಫೋನ್ ಮಾಡಿದೆ. ನಿರ್ದೇಶಕರು ಕಥೆಯನ್ನು ಬಹಳ ಚೆನ್ನಾಗಿ ಹೇಳಿದ್ದರು. ಅದಕ್ಕಿಂತ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಅಪ್ಪ – ಮಗನ ಪಾತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಅಭಿನಯ ಸೂಪರ್. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಚಿತ್ರ ಕೂಡ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ಈ ಚಿತ್ರದ ಮೂಲಕ ನನ್ನ ಪತ್ನಿ ಯಮುನ ಚಂದ್ರು ಅವರು ಪೂರ್ಣಪ್ರಮಾಣದ ನಿರ್ಮಾಪಕಿಯಾಗಿದ್ದಾರೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಡಿಸೆಂಬರ್ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದೆ. ಆಗಮಿಸಿದ ಎಲ್ಲಾ ಅತಿಥಿಗಳಿಗೂ ಧನ್ಯವಾದ ಎಂದು ಆರ್ ಚಂದ್ರು ಹೇಳಿದರು.
ನಾಯಕ ‘ಡಾರ್ಲಿಂಗ್’ ಕೃಷ್ಣ ಮಾತನಾಡಿ, ರಾಜಾಮೋಹನ್ ಅವರು ಈ ಕಥೆ ಹೇಳಿದಾಗ ಬಹಳ ಇಷ್ಟವಾಗಿತ್ತು. ನಾನು ಹಾಗೂ ಮಿಲನಾ ಅವರು ಕಥೆ ಕೇಳಿದೆವು. ನಿರ್ದೇಶಕರು ತಮಿಳಿನಲ್ಲಿ ಕಥೆ ಹೇಳಿದ್ದು. ನನಗೆ ತಮಿಳು ಬರಲ್ಲ. ಮಿಲನ ಅವರಿಗೆ ಬರುತ್ತದೆ. ಅವರು ನನಗೆ ಕಥೆ ಬಗ್ಗೆ ವಿವರಿಸುತ್ತಿದ್ದರು. ನಮ್ಮ ಸುತ್ತಲ್ಲಿನಲ್ಲೇ ನಡೆಯುವ ಕಥೆಯನ್ನು ನಿರ್ದೇಶಕ ರಾಜಾಮೋಹನ್ ಬಹಳ ಸೊಗಾಸಾಗಿ ಹೇಳುತ್ತಾರೆ. ಅವರು ಕೆಲವು ಪಾತ್ರಗಳ ಬಗ್ಗೆ ಹೇಳುತ್ತಿದ್ದಾಗ ನನ್ನ ಕಣ್ಣೆದುರು ಅಮೃತ ಅಯ್ಯಂಗಾರ್ ಹಾಗೂ ನಾಗಭೂಷಣ ಅವರೆ ಬಂದರು. ನಾನು ಚಂದ್ರು ಅವರಿಗೆ ಹೇಳಿದೆ. ಅವರು ನನ್ನ ಆಯ್ಕೆಯೆ ಸರಿ ಎಂದರು. ಅಪ್ಪ – ಮಗನ ಕುರಿತಾದ ಈ ಚಿತ್ರ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡಲ್ಲ. ಎರಡವರೆ ಗಂಟೆ ಚಿತ್ರ ನೋಡಿ ಹೊರ ಬಂದಾಗ ಒಂದೊಳ್ಳೆ ಚಿತ್ರ ನೋಡಿದ ಅನುಭವ ನಿಮ್ಮಗಾಗಿರುತ್ತದೆ ಎಂದರು.
ಈ ಬದುಕಿನ ಓಟದಲ್ಲಿ ನೂರಾರು ತಲ್ಲಣಗಳು ಎದುರಾಗುತ್ತದೆ. ಅದಕ್ಕೆಲ್ಲಾ ಒಂದೇ ಉತ್ತರ ಅಪ್ಪ. ಅಪ್ಪ ಎಂದರೆ ಭರವಸೆ, ಅಪ್ಪ ಎಂದರೆ ಧೈರ್ಯ, ಅಪ್ಪ ಎಂದರೆ ಧಾತ್ರಿ ಹೀಗೆ…ಇಂತಹ ಅಪ್ಪನ ಗುಣಗಳ ವರ್ಣಿಸುವ ಹಾಡನ್ನು ಬರೆಯಲು ಅವಕಾಶ ನೀಡಿದ ಚಂದ್ರು ಅವರಿಗೆ ಧನ್ಯವಾದ ಎಂದರು ಗೀತರಚನೆಕಾರ ಮಂಜುನಾಥ್ ಮಾಗೋದಿ.
ಈ ಹಾಡು ಬಹಳ ಇಷ್ಟವಾಯಿತು. ನಾನು “ಫಾದರ್” ಚಿತ್ರದಲ್ಲಿ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅಮೃತ ಅಯ್ಯಂಗಾರ್ ಹೇಳಿದರು.
ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ನಾನು ನಟಿಸಿರುವ ಮೂರನೇ ಚಿತ್ರವಿದು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಟ ನಾಗಭೂಷಣ್ ತಿಳಿಸಿದರು. ಹಾಡಿನ ಕುರಿತು ಸಂಗೀತ ನಿರ್ದೇಶಕ ನಕುಲ್ ಅಭಯಂಕರ್ ಮಾಹಿತಿ ನೀಡಿದರು. ಛಾಯಾಗ್ರಾಹಕ ಸುಜ್ಞಾನ್ ಹಾಗೂ ಸಂಕಲನಕಾರ ರಘುನಾಥ್ “ಫಾದರ್” ಚಿತ್ರದ ಕುರಿತು ಮಾತನಾಡಿದರು.

