Haveri: 70 thousand, 2000 interest per week! Tortured for 4 days for not paying the money? – 70 ಸಾವಿರ ಹಣಕ್ಕೆ ವಾರಕ್ಕೆ 1.200 ರಿಂದ 2 ಸಾವಿರದವರೆಗೆ ಬಡ್ಡಿ ಹಾಕಿದ್ದನಂತೆ. ವಾರದ ಬಡ್ಡಿ ಕೊಟ್ಟಿಲ್ಲ ಅಂತ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ, ಆತನ ಕಾಲು ಕಟ್ಟಿ ಹಾಕಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಹೇಯ ಕೃತ್ಯ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ.
ಹಾವೇರಿ (ಅ.26): ಸಾಲಕ್ಕೆಂದು ಹಣ ಕೊಡುವವರು ಬಡ್ಡಿ-ಚಕ್ರ ಬಡ್ಡಿ ಹಾಕಿ ಹಣ ಪಡೆದವರಿಂದ ವಸೂಲಿ ಮಾಡ್ತಾರೆ. ಇದ್ರಿಂದ ಸಾಲ ಪಡೆದ ಅದೆಷ್ಟೋ ಮಂದಿ ಬೀದಿಗೆ ಬಂದ ಉದಾಹರಣೆ ಕೂಡ ಇದೆ. ಅಂಥಹದ್ದೇ ಘಟನೆ ಹಾವೇರಿ ಜಿಲ್ಲೆಯ ಬಂಕಾಪುರ ಪಟ್ಟಣದಲ್ಲೂ ನಡೆದಿದೆ. ವಾರದ ಬಡ್ಡಿ ಕಟ್ಟದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ಕೊಟ್ಟಿದ್ದಾರೆ. 70 ಸಾವಿರ ಸಾಲಕ್ಕಾಗಿ ಸಾಲಗಾರನ ಮೇಲೆಯೇ ಬಡ್ಡಿದಾರರ ಕ್ರೌರ್ಯ ಮಿತಿಮೀರಿದ್ದು, 4 ದಿನ ಕೂಡಿ ಹಾಕಿ ಹಲ್ಲೆ ಮಾಡಿದ್ದಷ್ಟೇ ಅಲ್ಲದೇ ಆತನ ಬಾಯಿಗೆ ಮೂತ್ರ ಸುರಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ.
ಬಾಯಿಗೆ ಮೂತ್ರ ಸುರಿಸಿ ವಿಕೃತಿ : 70 ಸಾವಿರ ಹಣಕ್ಕೆ ವಾರಕ್ಕೆ 1.200 ರಿಂದ 2 ಸಾವಿರದವರೆಗೆ ಬಡ್ಡಿ ಹಾಕಿದ್ದನಂತೆ. ವಾರದ ಬಡ್ಡಿ ಕೊಟ್ಟಿಲ್ಲ ಅಂತ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ, ಆತನ ಕಾಲು ಕಟ್ಟಿ ಹಾಕಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ ಹೇಯ ಕೃತ್ಯ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆತನಿಗೆ ಸಿಗರೇಟ್ನಿಂದ ಸುಟ್ಟು ಹಿಂಸೆ ಕೊಟ್ಟಿದ್ದು, ಬಾಯಿಗೆ ಮೂತ್ರ ಸುರಿಸಿ ವಿಕೃತಿ ಮೆರೆದ ಆರೋಪ ಕೇಳಿ ಬಂದಿದೆ.
4 ದಿನ ಕೂಡಿ ಹಾಕಿ ಚಿತ್ರಹಿಂಸೆ! : ಕೆಲವು ವಾರ ಬಡ್ಡಿ ಕೊಡದಿದ್ದಕ್ಕೆ ಆರೋಪಿಗಳು ಅಟ್ಟಹಾಸ ಮೆರೆದಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಣಿಕಂಠನನ್ನು ಅಕ್ಟೋಬರ್ 16ರಂದು ಕರೆದೊಯ್ದು 4 ದಿನ ಕೂಡಿ ಹಾಕಿದ್ದರಂತೆ. ನಾಲ್ಕು ದಿನಗಳ ಚಿತ್ರಹಿಂಸೆಯ ಬಳಿಕ ಆರೋಪಿಗಳಿಂದ ಸಂತ್ರಸ್ತ ತಪ್ಪಿಸಿಕೊಂಡಿದ್ದ. ಅಕ್ಟೋಬರ್ 20ರಂದು ಅಪರಿಚಿತ ವ್ಯಕ್ತಿಯ ನೆರವಿನಿಂದ ಎಸ್ಕೇಪ್ ಆಗಿದ್ದಾನಂತೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ : ಸ್ಥಳೀಯರ ಸಹಾಯದಿಂದ ಕುಟುಂಬಸ್ಥರಿಗೆ ಮಣಿಕಂಠ ವಿಷಯ ಮುಟ್ಟಿಸಿದ್ದಾನೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಣಿಕಂಠನಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮಣಿಕಂಠ ಹಳವಳ್ಳಿ ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ನಾಲ್ವರ ವಿರುದ್ಧ ಪೊಲೀಸರಿಗೆ ದೂರು : ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ವಿರುದ್ಧ ಚಿತ್ರಹಿಂಸೆ ನೀಡಿರೋ ಬಗ್ಗೆ ಮಣಿಕಂಠ ದೂರು ನೀಡಿದ್ದಾರೆ. ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಗೆ ಮುಂದಾಗಿದ್ದಾರೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಮಣಿಕಂಠ ಕುಟುಂಬಸ್ಥರು ಆಗ್ರಹಿಸಿದ್ದಾರೆ.
