Dhanveer-Vijalakshmi: ‘Darshan sir knows everything’, actor Dhanveer gives a new twist to the Vijayalakshmi fight! – ವಿವಾದದ ಕುರಿತು ಪ್ರತಿಕ್ರಿಯಿಸಿರುವ ಧನ್ವೀರ್, ತಮ್ಮ ವಿರುದ್ಧ ಸುಳ್ಳು ದೂರು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ದರ್ಶನ್ ನ ಜೈಲಿನಿಂದ ಹೊರಗೆ ತರಲು ಪ್ರಯತ್ನಿಸುತ್ತಿರುವುದೇ ತಮ್ಮನ್ನು ಗುರಿಯಾಗಿಸಲು ಕಾರಣ ಎಂದು ಹೇಳಿಕೊಂಡಿದ್ದಾರೆ.
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ನಡುವಿನ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದ ಬೆನ್ನಲ್ಲೇ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಧನ್ವೀರ್, ತಮ್ಮ ವಿರುದ್ಧ ಸುಳ್ಳು ದೂರು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ದರ್ಶನ್ ನ ಜೈಲಿನಿಂದ ಹೊರಗೆ ತರಲು ಪ್ರಯತ್ನಿಸುತ್ತಿರುವುದೇ ತಮ್ಮನ್ನು ಗುರಿಯಾಗಿಸಲು ಕಾರಣ ಎಂದು ಹೇಳಿಕೊಂಡಿದ್ದಾರೆ.
ಜನತಾ ನ್ಯೂಸ್ ಜೊತೆಗೆ ಮಾತನಾಡಿದ ಧನ್ವೀರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮ್ಯಾನೇಜರ್ ನಾಗರಾಜ್ ಅವರೊಂದಿಗೆ ಉಂಟಾಗಿರುವ ವಿವಾದದ ಬಗ್ಗೆ ಮಾತನಾಡಿದ್ದಾರೆ.ಎಲ್ಲರೂ ಸೇರಿ ತಮ್ಮ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ಮತ್ತು ನಾಗರಾಜ್ ಬಂದು ಗಲಾಟೆ ಮಾಡಿ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಇಷ್ಟು ದಿನ ಇಲ್ಲದ ಹಣದ ವಿಚಾರ ಈಗ ಏಕೆ ಮುನ್ನೆಲೆಗೆ ಬಂದಿದೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಈ ವಿವಾದಕ್ಕೆ ಹಣಕಾಸಿನ ವ್ಯವಹಾರ ಕಾರಣವಲ್ಲ. ಬದಲಿಗೆ ದರ್ಶನ್ ನ ಜೈಲಿನಿಂದ ಹೊರಗೆ ತರಲು ತಾವು ಪ್ರಯತ್ನಿಸುತ್ತಿರುವುದರಿಂದ ತಮ್ಮ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಧನ್ವೀರ್ ಹೇಳಿದ್ದಾರೆ.
ಇನ್ನೂ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಧನ್ವೀರ್, ದರ್ಶನ್ ನ ಜೈಲಿನಿಂದ ಹೊರಗೆ ತರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಏನೇ ಆದರೂ ನಾನು ಬಿಡಲ್ಲ, ದರ್ಶನ್ ಸರ್ ನ ಹೊರಗೆ ತಂದೇ ತರುತ್ತೇನೆ ಎಂದು ಹೇಳಿದ್ದಾರೆ.
ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಮನಸ್ತಾಪಕ್ಕೆ ಹಣಕಾಸಿನ ವ್ಯವಹಾರವೇ ಕಾರಣ ಎಂಬ ರೀತಿಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಧನ್ವೀರ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ತಮ್ಮ ನಡುವೆ ಹಣದ ವಿಚಾರದಲ್ಲಿ ಯಾವುದೇ ವಿವಾದವಿಲ್ಲ ಎಂದು ಹೇಳಿದ್ದಾರೆ. ಇಷ್ಟು ದಿನ ಪ್ರಸ್ತಾಪವಾಗದ ಹಣದ ವಿಚಾರ ಈಗ ಏಕೆ ಮುನ್ನೆಲೆಗೆ ಬಂದಿದೆ ಎಂಬ ಪ್ರಶ್ನೆಯನ್ನೂ ಧನ್ವೀರ್ ಎತ್ತಿದ್ದಾರೆ.
ಎಲ್ಲ ವಿಚಾರ ದರ್ಶನ್ ಅವರಿಗೂ ಗೊತ್ತಿದೆ : ಈ ಬೆಳವಣಿಗೆಗಳ ಬಗ್ಗೆ ದರ್ಶನ್ ಗೂ ತಿಳಿದಿದೆ ಎಂದು ಧನ್ವೀರ್ ಹೇಳಿದ್ದಾರೆ. ತಮ್ಮ ವಿರುದ್ಧ ನಡೆಯುತ್ತಿದೆ ಎನ್ನಲಾದ ಬೆಳವಣಿಗೆಗಳ ಕುರಿತು ದರ್ಶನ್ ಗೆ ಮಾಹಿತಿ ಇದೆ ಎಂದು ಧನ್ವೀರ್ ತಿಳಿಸಿದ್ದಾರೆ.
