Vinay Kulkarni: Will Vinay Kulkarni Cancel Bail? An important hearing in the Supreme Court, the hand of the MLA is Dhavadha! – ವಿನಯ್ ಕುಲಕರ್ಣಿ ಜಾಮೀನು ವಜಾಗೊಳಿಸುವಂತೆ ಯೋಗೀಶ್ ಗೌಡ ಸಹೋದರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದೆ.
ನವದೆಹಲಿ ಅ.27: ಧಾರವಾಡದಲ್ಲಿ ನಡೆದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಅವರ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ರು. ಶಿಕ್ಷೆ ವಜಾ ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ವಿನಯ್ ಕುಲಕರ್ಣಿ ಜಾಮೀನು ವಜಾಗೊಳಿಸುವಂತೆ ಯೋಗೀಶ್ ಗೌಡ ಸಹೋದರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇಂದು ಶಾಸಕ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದೆ.
ವಿನಯ್ ಕುಲಕರ್ಣಿಗೆ ಇಂದು ಬಿಗ್ ಡೇ : ಹೈಕೋರ್ಟ್ ಆದೇಶಕ್ಕೆ ತಡೆ ನೀಡಿ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾ. ಶ್ರೀ ಚಂದ್ರಶೇಖರ್ ಅವರ ಪೀಠದಲ್ಲಿ ಅರ್ಜು ವಿಚಾರಣೆ ನಡೆಯಲಿದೆ. ಇಂದೇ ಆದೇಶ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಸುಪ್ರೀಂ ಆಕ್ಷೇಪ, ಮತ್ತೆ ಬಂಧನ ಭೀತಿ : ಹಿಂದಿನ ವಿಚಾರಣೆಗಳ ವೇಳೆ ಸಾಕ್ಷ್ಯನಾಶ ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ಆರೋಪಗಳ ಹಿನ್ನೆಲೆಯಲ್ಲಿ, “ಕೊಲೆ ಆರೋಪಿಗಳು ವಿಧಾನಸಭೆಯಲ್ಲಿ ಇರಬೇಕೇ?” ಎಂದು ನ್ಯಾಯಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿ ವಿನಯ್ ಕುಲಕರ್ಣಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಸುಪ್ರೀಂ ಕೋರ್ಟ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲು ನಿರಾಕರಿಸಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಬಂಧನದ ಭೀತಿ ಎದುರಾಗಿದೆ.
ಕಳೆದ ಬಾರಿ ವಿಚಾರಣೆ ವೇಳೆ ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್. ಈ ರೀತಿ ಕೊಲೆಯಲ್ಲಿ ಭಾಗಿಯಾದವರು ವಿಧಾನಸಭೆಯಲ್ಲಿ ಇರಬೇಕಾ? ಗಂಭೀರ ಆರೋಪಗಳಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಇರಲು ಅರ್ಹರೇ.? ಇಂತವರನ್ನು ಅನರ್ಹ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶಾಸಕ ವಿನಯ್ ಕುಲಕರ್ಣಿ ಎದೆಯಲ್ಲಿ ಈಗ ಭಯ ಶುರುವಾಗಿದೆ.
ಜೀವಾವಧಿ ಶಿಕ್ಷೆ : 2016ರಲ್ಲಿ ನಡೆದ ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಏಪ್ರಿಲ್ 2026 ರಲ್ಲಿ ವಿನಯ್ ಕುಲಕರ್ಣಿ ಸೇರಿದಂತೆ ಇತರ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜಾಮೀನು ನೀಡಿದ್ದ ಹೈಕೋರ್ಟ್! : ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಜುಲೈ 2026 ರಲ್ಲಿ ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಇದೀಗ ಜಾಮೀನು ರದ್ಧಾಗುವ ಟೆನ್ಷನ್ನಲ್ಲಿ ವಿನಯ್ ಕುಲಕರ್ಣಿ ಇದ್ದು, ಮತ್ತೆ ಜೈಲು ಪಾಲಾಗ್ತಾರಾ ಕಾಂಗ್ರೆಸ್ ಶಾಸಕ ಅನ್ನೋ ಚರ್ಚೆ ಜೋರಾಗಿದೆ.
