Darshan-Dhanveer: 3 FIRs filed against Dhanveer? Big shock for Darshan Dosti – Dhanveer: ನಟ ಧನ್ವೀರ್ ವಿರುದ್ಧ ಇಂದೇ ದಾಖಲಾಗುತ್ತಾ 3 ಎಫ್ಐಆರ್? ಯಾಕೆ? ಯಾರಿಂದ?
ಸ್ಯಾಂಡಲ್ವುಡ್ ನಟ ಧನ್ವೀರ್ ವಿರುದ್ದ ಬೆದರಿಕೆ, ನಿಂದನೆ, ಕಿರುಕುಳ ಆರೋಪ ಕೇಳಿ ಬಂದಿದ್ದು ಧನ್ವೀರ್ ವಿರುದ್ಧ ಮೂರು ಎನ್ ಸಿಆರ್ ಗಳು ದಾಖಲಾಗಿವೆ. ಆದರೆ ಈಗ ದೂರುದಾರರು ಎಫ್ಐಆರ್ ದಾಖಲಿಸಲು ಇಂದು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಫ್ಐಆರ್ ದಾಖಲಿಸಲು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿದೆ. ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ ಠಾಣೆಗಳಲ್ಲಿ ಎನ್ ಸಿಆರ್ ದಾಖಲಾಗಿದ್ದು, ಇದೀಗ ದೂರುದಾರರು ತಾವು ನೀಡಿರುವ ದೂರನ್ನು ಎಫ್ಐಆರ್ ಮಾಡುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿರುವ ಅಂಶಗಳು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲದ ಹಿನ್ನಲೆ ಪೊಲೀಸರು ಎನ್ ಸಿಆರ್ ದಾಖಲಿಸಿದ್ದರು. ಆದರೆ ಈಗ ದೂರುದಾರರು ಇಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಫ್ಐಆರ್ ದಾಖಲಿಸಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಕೋರ್ಟ್ ಅನುಮತಿ ನಂತರ ಮೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಸಾಧ್ಯತೆ ಇದು ಧನ್ವೀರ್ಗೆ ಬಿಗ್ ಶಾಕ್ ಕಾದು ಕುಳಿತಿದೆ.
