Dhanveer vs Vijayalakshmi: Vijayalakshmi’s shocking decision due to anger over Dhanveer; ‘Shokdaar’ sparks against Darshan’s wife again – ಸ್ಯಾಂಡಲ್ವುಡ್ ನಟ ಧನ್ವೀರ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ನಡುವೆಯೇ ಧನ್ವೀರ್ಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು (ಅ.27): ಸ್ಯಾಂಡಲ್ವುಡ್ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಸಮರ ದಿನದಿಂದ ದಿನಕ್ಕೆ ತಾರಕ್ಕೇರುತ್ತಿದೆ. ದರ್ಶನ್ ಜೊತೆ ತಮ್ಮನಂತೆ ನಿಂತಿದ್ದ ಧನ್ವೀರ್ ಹಣ ಪಡೆದು ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಧನ್ವೀರ್ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದರ ನಡುವೆ ನಟ ಧನ್ವೀರ್ಗೆ ವಿಜಯಲಕ್ಷ್ಮಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಇದಕ್ಕೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಧನ್ವೀರ್ ತಿರುಗೇಟು ನೀಡಿದ್ದಾರೆ.
ದರ್ಶನ್ ಅಕೌಂಟ್, ಧನ್ವೀರ್ ಬ್ಲಾಕ್ : ದರ್ಶನ್ ಪತ್ನಿ ಬಗ್ಗೆ ಧನ್ವೀರ್ ಮಾತಾಡಿದ್ದಾರೆ ಎನ್ನಲಾದ ಆಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ಇದರ ವಿರುದ್ಧ ವಿಜಯಲಕ್ಷ್ಮಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ನಡುವೆಯೇ ಧನ್ವೀರ್ಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ನಟ ದರ್ಶನ್ ಸೋಷಿಯಲ್ ಮಿಡಿಯಾ ಅಕೌಂಟಿಂದ ಧನ್ವೀರ್ ನನ್ನು ಬ್ಲಾಕ್ ಮಾಡಿಸಿದ್ದಾರೆ ಎನ್ನಲಾಗ್ತಿದೆ.
ಬ್ಲಾಕ್ ಮಾಡಿದ್ದಕ್ಕೆ ಧನ್ವೀರ್ ಕಿಡಿ : ನನ್ನನ್ನು ಕೆಟ್ಟವನಾಗಿ ಬಿಂಬಿಸಬಹುದು. ನೆಗೆಟಿವ್ ಪಿಆರ್ ಮಾಡಿದ್ದರು ದರ್ಶನ್ ಸರ್ ನನ್ನ ಹೃದಯದ ಬಾಗಿಲಲ್ಲಿ ಇರ್ತಾರೆ. ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ, ನಿಮ್ಮ ವಿರೋಧದಿಂದ ಸಾಯುವುದು ಇಲ್ಲ. ಜಗತ್ತು ಏನೇ ಹೇಳಿದರು ನನ್ನ ನಿಲುವು ಒಂದೇ ದರ್ಶನ್ ಸರ್ THEN, NOW, FOREVER ಎಂದು ಧನ್ವೀರ್ ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಪರೋಕ್ಷವಾಗಿ ದರ್ಶನ್ ಪತ್ನಿ ಕೊಟ್ಟ ತಿರುಗೇಟು ಅಂತಿದ್ದಾರೆ ನೆಟ್ಟಿಗರು.

