Renukaswamy Case: Two witnesses to be questioned! A major turning point in the Renukaswamy case today – Renukaswamy Case: ರೇಣುಕಾಸ್ವಾಮಿ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆಯಲಿದ್ದು, ಇಂದು ಇಬ್ಬರು ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಹತ್ವದ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಐ ವಿಟ್ನೆಸ್ ಗಳಾದ ಪುನೀತ್ ಹಾಗೂ ಕಿರಣ್ ವಿಚಾರಣೆ ನಡೆಯಲಿದ್ದು, CW 91 ಪುನೀತ್, CW 76 ಕಿರಣ್ ಸಾಕ್ಷಿ ವಿಚಾರಣೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆಯ ವೇಳೆ ಪ್ರತ್ಯಕ್ಷವಾಗಿ ಹಾಜರಿದ್ದ ಪುನೀತ್ ಹಾಗೂ ಕಿರಣ್ ಅವರು ಘಟನೆ ಬಗ್ಗೆ ಇಂದು ಸಾಕ್ಷಿ ನುಡಿಯಲಿದ್ದಾರೆ. ಸಾಕ್ಷಿ ನುಡಿಯೋದಕ್ಕೆ 59ನೇ ಸೆಷನ್ಸ್ ಕೋರ್ಟ್ ಗೆ ಇಬ್ಬರು ಸಾಕ್ಷಿಗಳು ಹಾಜರಾಗಲಿದ್ದಾರೆ. ಸಾಕ್ಷಿ ನುಡಿಯಲು ಇಬ್ಬರಿಗೂ ಕೋರ್ಟ್ ಸಮನ್ಸ್ ನೀಡಿದ್ದು, ಪಟ್ಟಣಗೆರೆ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಾಕ್ಷಿಗಳು ಇಂದು ಸಾಕ್ಷಿ ನುಡಿಯಲಿದ್ದಾರೆ.
ರೇಣುಕಾಸ್ವಾಮಿ ಕಿಡ್ನಾಪ್ ಮಾಡಿ ಶೆಡ್ ನಲ್ಲಿ ಕೂಡಿಟ್ಟು ಹಲ್ಲೆ ಮಾಡಿದ್ದು ಘಟನೆಯನ್ನು ಕಣ್ಣಾರೆ ಕಂಡಿದ್ದ ಪುನೀತ್, ಕಿರಣ್ ಇಂದು ಸಾಕ್ಷಿ ಹೇಳಲಿದ್ದಾರೆ. ನಂತರ ಶೆಡ್ ಗೆ ದರ್ಶನ್, ಪವಿತ್ರಾಗೌಡ ಆಗಮನ ಹಿನ್ನೆಲೆ ಹಲ್ಲೆಯನ್ನ ಕಂಡಿದ್ದ ಇಬ್ಬರು ಸಾಕ್ಷಿಗಳು ಎಲ್ಲವನ್ನೂ ಇಂದು ಹೇಳಲಿದ್ದಾರೆ.
ದರ್ಶನ್ ಹಾಗೂ ಪವಿತ್ರಾಗೌಡ ಕಾರಿನಲ್ಲಿ ಶೆಡ್ ಗೆ ಆಗಮಿಸಿದ್ದರು. ಶೆಡ್ ನಲ್ಲಿ ಯಾರು ಯಾರು ಇದ್ದರು? ಹಲ್ಲೆ ನಡೆಸಿದ್ದು ಯಾರು, ಯಾವ ರೀತಿ ಎಂಬಿತ್ಯಾದಿ ವಿಚಾರಗಳನ್ನು ಬಿಚ್ಚಿಡಲಿರೋ ಸಾಕ್ಷಿಗಳ ಹೇಳಿಕೆ ಇಂದು ಮಹತ್ವವಾಗಿರಲಿದೆ.
ರೇಣುಕಾಸ್ವಾಮಿ ಕೊಲೆ ಸಂಬಂಧ ಮಹತ್ವ ಪಡೆದಿರುವ ಇಬ್ಬರು ಸಾಕ್ಷಿಗಳ ಹೇಳಿಕೆ ಕೇಸ್ಗೆ ಯಾವ ರೀತಿ ತಿರುವು ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಪ್ರಾಸಿಕ್ಯೂಷನ್ ಪರ ವಕೀಲರು ಪುನೀತ್ ಹಾಗೂ ಕಿರಣ್ ವಿಚಾರಣೆ ನಡೆಸಲಿದ್ದಾರೆ. ಸದ್ಯ ಐ ವಿಟ್ನೆಸ್ ಗಳ ಸಾಕ್ಷಿ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.
