
ವಿರಾಜಪೇಟೆ: ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್ ಕಾಫಿತೋಟಕ್ಕೆ ನುಗ್ಗಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ಬಳಿ ನಡೆದಿದೆ.
ವಿರಾಜಪೇಟೆಯ ಕಾವೇರಿ ಕಾಲೇಜು ಸಮೀಪದ ಇಳಿಜಾರಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕೆ.ಎಸ್.ಆರ್.ಟಿ.ಸಿ ಬಸ್ ರಸ್ತೆ ಪಕ್ಕದ ಕಾಫಿತೋಟಕ್ಕೆ ನುಗ್ಗಿದೆ. ಬಸಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದು ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಡಿಕೇರಿಯಿಂದ ವಿರಾಜಪೇಟೆ ಮಾರ್ಗದ ಮೂಲಕ ಕೋಲಾರಕ್ಕೆ ತೆರಳುತ್ತಿದ್ದ KSRTC ಬಸ್ ಇದಾಗಿತ್ತು.
