ಎಚ್.ಡಿ.ಕೋಟೆ: ಹೆಬ್ಬಲಗುಪ್ಪೆ ಗ್ರಾಮದ ಗೋವಿಂದ ಶೆಟ್ಟಿ ಎಂಬವರ ಮನೆಯ ಗೋಡೆ ಭಾನುವಾರ ತಡ ರಾತ್ರಿ ಕುಸಿದು, ಒಳಗಡೆ ಸಿಲುಕಿ ಕೂಗಾಡುತ್ತಿದ್ದ, ಕುಟುಂಬ ಸದಸ್ಯರನ್ನು ಗ್ರಾಮಸ್ಥರು ಚಾವಣಿಯ ಮೂಲಕ ಪಾರು ಮಾಡಿದರು.
ಗೋವಿಂದ ಶೆಟ್ಟಿ ಊಟ ಮುಗಿಸಿ ಮನೆಯಿಂದ ಹೊರ ಬಂದಿದ್ದರು. ಪತ್ನಿ ರಾಧಾ, ಪುತ್ರ ರೋಹಿತ್ ಹಾಗೂ ಅವರ ದೊಡ್ಡಮ್ಮ ಸುವರ್ಣಮ್ಮ ಮೂವರು ಮನೆಯೊಳಗೆ ಇದ್ದ ಸಂದರ್ಭದಲ್ಲಿ ಗೋಡೆ ಕುಸಿದಿದೆ. ಎಲ್ಲರನ್ನೂ ಗ್ರಾಮಸ್ಥರು ರಕ್ಷಿಸಿದ್ದಾರೆ.
ಮನೆಯಲ್ಲಿದ್ದ ದಿನಸಿ, ಗೃಹಬಳಕೆ ಪದಾರ್ಥಗಳು ಗೊಡೆಯ ಅವಶೇಷಗಳಡಿ ಸಿಲುಕಿವೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರ್ಕಾರಕ್ಕೆ ವರದಿ ನೀಡಿ, ಮನೆ ನಿರ್ಮಿಸಿ ಕೊಡುವ ಬಗ್ಗೆ ತಹಶೀಲ್ದಾರ್ ಶ್ರೀನಿವಾಸ ಭರವಸೆ ನೀಡಿದ್ದಾರೆ.
