ರಾಯಚೂರು : ರಾಯಚೂರಿನಲ್ಲಿ ಚೆಸ್ಕಾಂ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ಥಿ ಕಾರ್ಯಾಚರಣೆ ವೇಳೆ ಸಿಬ್ಬಂದಿಯೋರ್ವ ವಿದ್ಯುತ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆಯೊಂದು ರಾಜಚೂರಿನ ಲಿಂಗಸಗೂರು ತಾಲ್ಲೂಕಿನ ಗೊರೆಬಾಳ ಗ್ರಾಮದಲ್ಲಿ ಘಟನೆ ನಡೆದಿದೆ.ಗೊರೆಬಾಳ ಗ್ರಾಮದಲ್ಲಿ ಟಿಸಿ ದುರಸ್ತಿಗೆಂದು ಲಿಂಗಸಗೂರು ಜೆಸ್ಕಾಂ ಉಪ ವಿಭಾಗದಲ್ಲಿ ಪವರ್ ಮ್ಯಾನ್ ಕಾರ್ಯ ನಿರ್ವಹಿಸುತ್ತಿದ್ದ ಪವರ್ ಮ್ಯಾನ್ ನಾಗರಾಜ್ (30) ಮೃತಪಟ್ಟಿದ್ದಾರೆ. ಕೆಲಸದ ವೇಳೆಯಲಲ್ಇ ಸಿಬ್ಬಂದಿಗೆ ನೀಡಬೇಕಾದ ಸೇಫ್ಟಿ ಪ್ರಿಕಾಪ್ಷನ್ ಸಲಕರಣೆಗಳನ್ನು ನೀಡದೆ ಹಾಗೆ ಕೆಲಸ ಮಾಡಿರುವುದರಿಂದ ಈ ಘಟನೆಗೆ ಕಾರಣವಾಗಿದೆ. ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಆಸ್ಪತ್ರೆಗೆ ರವಾನಿಸುವಂತಹ ಸಮಯದಲ್ಲಿ ದುರಾದೃಷ್ಟವಶಾತ್ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣದ ಕುರಿತು ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
