H D REVANNA ಗೆ ಸುಪ್ರೀಂಕೋರ್ಟ್ನಿಂದ ನೋಟಿಸ್ https://en.wikipedia.org/wiki/H._D._Revanna
ನವದೆಹಲಿ, ಜು.13: ಮನೆ ಕೆಲಸದಾಕೆ ಮೇಲೆ ದೌರ್ಜನ್ಯ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಮಾಡಿದೆ. ಇದರಿಂದ ಇಷ್ಟು ದಿನ ರಿಲೀಫ್ ಮೂಡ್ನಲ್ಲಿದ್ದ ಹೆಚ್.ಡಿ.ರೇವಣ್ಣಗೆ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ. ಪಜ್ವಲ್ ರೇವಣ್ಣ ಪ್ರಕರಣದಲ್ಲಿ ಮನೆ ಗೆಲಸದಾಕೆ ಮೇಲೆ ದೌರ್ಜನ್ಯವೆಸಗಿದ ಸಂಬಂಧಪ್ರಕರಣ ದಾಖಲಾಗಿತ್ತು.

ಶಾಸಕ ಹೆಚ್ಡಿ ರೇವಣ್ಣ ವಿರುದ್ಧ ಲೈಗಿಂಕ ದೌರ್ಜನ್ಯ, ಬೆದರಿಕೆ, ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಹಲ್ಲೆ ಪ್ರಕರಣ ರದ್ದು ಮಾಡಿತ್ತು. ಲೈಗಿಂಕ ದೌರ್ಜನ್ಯ ಪ್ರಕರಣ ತನಿಖೆ ಪುರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪವಿದೆ. ತಂದೆ ರೇವಣ್ಣ ವಿರುದ್ಧ ಬೇರೆ ಆರೋಪಗಳಿವೆ. ಈಗ ಒಂದೇ ಕೇಸ್ ಎಂದು ತಂದೆ ಮೇಲೂ ರೇಪ್ ಆರೋಪ ಹೊರಿಸಲು ಆಗುವುದಿಲ್ಲ ಎಂದು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ. ಪಾರ್ದಿವಾಲ ನೇತೃತ್ವದ ಪೀಠ, ವಿಚಾರಣೆ ವೇಳೆ ಹೈಕೋರ್ಟ್ ಆದೇಶದ ಬಗ್ಗೆ ಅಸಮಧಾನ ಹೊರಹಾಕಿದೆ. ಹಲ್ಲೆ ಪ್ರಕರಣವನ್ನು ರದ್ದುಪಡಿಸಿ, ಲೈಗಿಂಕ ದೌರ್ಜನ್ಯ ಮುಂದುವರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹೈಕೋರ್ಟ್ ಆರೋಪಿಯ ವಿರುದ್ಧದ ಚಾರ್ಜ್ ಬದಲಾಯಿಸಿದ್ದೇಕೆ ಎಂದು ಪೀಠ ಪ್ರಶ್ನಿಸಿದೆ.
