ಧಾರವಾಡ ಜುಲೈ-16, :- ಬೆಡ್ರೂಮ್ನಲ್ಲೇ ಡಾಕ್ಟರ್ ಗಂಡನ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಹತ್ಯೆಗೈದ ಡಾ.ಪ್ರಿಯಾಂಕಾ ಕರಾಳ ಮುಖ ಬಯಲಾಗಿದೆ. ವೈದ್ಯ ಕಿರಣ್ ಹೊನ್ನಣ್ಣನವರ್ ಹತ್ಯೆ ಕೇಸ್ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಪ್ರಿಯಾಂಕಾ ಅವರನ್ನ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಿಲ್ಲರ್ ಡಾಕ್ಟರ್ ತಪ್ಪೊಪ್ಪಿಕೊಂಡಿದ್ದು, ತಾನೇ ಪತಿಯನ್ನ ಹತ್ಯೆಗೈದಿರೋದಾಗಿ ಹೇಳಿದ್ದಾರೆ, ಜೊತೆಗೆ ಕಾರಣ ಕೂಡ ಬಾಯ್ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ಕಿರಣ್ ಹಾಗೂ ಡಾ. ಪ್ರಿಯಾಂಕಾಗೂ ಇದು 2ನೇ ಮದುವೆ
ಡಾ. ಕಿರಣ್ ಹಾಗೂ ಡಾ. ಪ್ರಿಯಾಂಕಾ ಇಬ್ಬರಿಗೂ ಮೊದಲೇ ಮದುವೆಯಾಗಿ ಡಿವೋರ್ಸ್ ಕೂಡ ಆಗಿದೆ. ಶ್ರೀಮಂತ ಮನೆತನದವರಾದ ಪ್ರಿಯಾಂಕಾ ಹಾಗೂ ಮಧ್ಯಮ ವರ್ಗದ ಡಾ ಕಿರಣ್ಗೂ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದೆ. 2ನೇ ಮದುವೆಗಾಗಿ ಸರ್ಚ್ ಮಾಡಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಬಳಿಕ ಆತ್ಮೀಯತೆ ಬೆಳೆದಿದೆ. ಇಬ್ಬರೂ ಕೆಲ ವರ್ಷಗಳ ಕಾಲ ಪ್ರೀತಿ ಮಾಡಿ ಬಳಿಕ ಮದುವೆಯಾಗಿದ್ರು. 9 ವರ್ಷಗಳ ಹಿಂದೆಯೇ ಇಬ್ಬರಿಗೂ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.
ಡಾ. ಕಿರಣ ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳ ಗ್ರಾಮದವರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಖ್ಯಾತ ಅರವಳಿಕೆ ತಜ್ಞರಾಗಿದ್ರು. ಇನ್ನು ವಿಜಯಪುರ ಮೂಲದ ಪ್ರಿಯಾಂಕಾ ನೇತ್ರ ತಜ್ಞೆಯಾಗಿದ್ರು. ಮದುವೆ ಬಳಿಕ ವೈದ್ಯೆಯಾಗಿದ್ದರೂ ಪ್ರಾಕ್ಟೀಸ್ ಮಾಡದೆ ಮನೆಯಲ್ಲೇ ಇದ್ದರಂತೆ. ಕೆಲ ವರ್ಷಗಳ ಹಿಂದಷ್ಟೇ ಈ ಜೋಡಿ ಫ್ಲಾಟ್ ಖರೀದಿಸಿ ಶಿಫ್ಟ್ ಆಗಿದ್ರಂತೆ. ಪತಿಯ ಕುಟುಂಬಸ್ಥರಿಂದ ದೂರವೇ ಇದ್ದ ಪ್ರಿಯಾಂಕಾ, ಕಿರಣ್ ಮನೆಯವರು ಬಂದ್ರೆ ಗಲಾಟೆ ಮಾಡುತ್ತಿದ್ದರಂತೆ. ಆಕೆಯ ವರ್ತನೆಯಿಂದ ಕಿರಣ್ ಹಾಗೂ ಕುಟುಂಬಸ್ಥರು ನೊಂದಿದ್ದರಂತೆ. ಬಡ ರೋಗಿಗಳ ಮೇಲೆ ಹೆಚ್ಚು ಕಾಳಜಿ ತೋರುತ್ತಿದ್ದ ಕಿರಣ್ ಹೆಂಡ್ತಿಯ ನಿತ್ಯ ಜಗಳಕ್ಕೆ ಬೇಸತ್ತಿದ್ದ ಎನ್ನಲಾಗ್ತಿದೆ.
ಹು-ಧಾ ಕಮಿಷನರ್ ಶಶಿಕುಮಾರ್
ಗಂಡನ ಮೇಲಿದ್ದ ಸಂಶಯದಿಂದಲೇ ನಡೆದಿತ್ತ ಕೊಲೆ
ಪತಿ ಕಿರಣ್ ಮೇಲೆ ಪ್ರಿಯಾಂಕಾಗೆ ಅನುಮಾನ ಮೂಡಿತ್ತು. ಆಗಾಗ ಗಂಡನ ಮೇಲೆ ಡೌಟ್ ಪಡ್ತಿದ್ದ ಪತ್ನಿ ಪ್ರಿಯಾಂಕಾ, ಬೇರೊಬ್ಬರ ಜೊತೆ ಸಂಬಂಧವಿದೆ ಅಂತ ಜಗಳವಾಡ್ತಿದ್ದಳು ಎನ್ನಲಾಗ್ತಿದೆ. ಮಂಗಳವಾರ ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಕಿರಣ್, ಬೆಡ್ರೂಮ್ನಲ್ಲಿ ಮಲಗಿದ್ದ ವೇಳೆಯೇ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಆಕೆಗೆ ಪತಿ ಕಿರಣ್ ಮೇಲೆ ಸಂಶಯ ಶುರುವಾಗಿತ್ತು.. ಆ ಒಂದು ಅನುಮಾನದಿಂದ ಗಂಡನನ್ನ ಕೊಂದಳಾ ಅನ್ನೋ ಪ್ರಶ್ನೆ ಮೂಡಿದ್ದೂ, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನೂ ಪೊಲೀಸರ ತನಿಖೆಯಲ್ಲಿ ತಾನೇ ಕೊಲೆ ಮಾಡಿರೋದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದು, ಈಕೆ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗ್ತಿದೆ. ಗಂಡನನ್ನ ಕೊಂದು, ಮಗುವಿನ ಮೇಲೂ ಹಲ್ಲೆ ಮಾಡಿದ್ದ ಈಕೆ ನಾಲ್ಕು ಇನ್ಸುಲಿನ್ ಇಂಜೆಕ್ಷನ್ ಪಡೆದು ಆತ್ಮಹತ್ಯೆ ಯತ್ನಿಸಿದ್ದಳು. ಇದೀಗ ಪ್ರಿಯಾಂಕಾಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


