RUKMINI RADHAKRISHANA: ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ ‘ರುಕ್ಮಿಣಿ ರಾಧಾಕೃಷ್ಣ; 2 ಹಾಡುಗಳ ಅದ್ಧೂರಿ ಬಿಡುಗಡೆ

ಶಿಲ್ಪಾ ಶ್ರೀನಿವಾಸ್: ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಭಿನ್ನ ಹಾಗೂ ಅದ್ಭುತ ಪ್ರೇಮಕಥೆ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಉಮೇಶ್ ಫಿಲಂಸ್ ಲಾಂಛನದಲ್ಲಿ ಎನ್. ಹನುಮಂತರಾಜು ಹಾಗೂ ಎನ್.ಹೆಚ್. ಉಮೇಶ್ ಜಂಟಿಯಾಗಿ ನಿರ್ಮಿಸುತ್ತಿರುವ, ಬಹುನಿರೀಕ್ಷಿತ ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾದ 2 ಸುಂದರ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನೆರವೇರಿತು.
ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಲಹರಿ ವೇಲು ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು. “ಈ ಸಿನಿಮಾದಲ್ಲಿ ಒಟ್ಟು 6 ಅದ್ಭುತ ಹಾಡುಗಳಿದ್ದು, ಎಲ್ಲವನ್ನೂ ಅಷ್ಟೇ ಜವಾಬ್ದಾರಿಯಿಂದ ಮತ್ತು ಸುಂದರವಾಗಿ ವಿಶುವಲೈಸ್ ಮಾಡಿದ್ದಾರೆ. ಹಾಡುಗಳು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಸಿನಿಮಾ ಮೇಲೆ ನನಗೂ ದೊಡ್ಡ ನಿರೀಕ್ಷೆ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕ್ಕೆ ಸ್ಯಾಂಡಲ್ವುಡ್ನ ಖ್ಯಾತ ಸಾಹಿತಿ ಕೆ. ಕಲ್ಯಾಣ್ ಅವರು ಸಾಹಿತ್ಯ ಬರೆದಿದ್ದಾರೆ. ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ತಮಿಳುನಾಡಿನ ಹಿನ್ನೆಲೆ ಇರುವುದರಿಂದ, ಅದಕ್ಕೆ ತಕ್ಕಂತೆ ಕನ್ನಡ ಮತ್ತು ತಮಿಳು ಎರಡೂ ಭಾಷೆಗಳನ್ನು ಒಟ್ಟಿಗೆ ಸೇರಿಸಿ ಒಂದು ವಿಶಿಷ್ಟವಾದ ಹಾಡನ್ನು ಪೋಣಿಸಿರುವುದಾಗಿ ಅವರು ತಿಳಿಸಿದರು. ಚಿತ್ರಕ್ಕೆ ಸುನಾದ್ ಗೌತಮ್ ಅವರ ಸಂಗೀತ ನಿರ್ದೇಶನವಿದೆ.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಪ್ರಾಣ್ ಸುವರ್ಣ, “ಕೃಷ್ಣನಿಗೆ ರುಕ್ಮಿಣಿ ಸಂಗಾತಿಯಾಗಿ ಉಳಿದರೆ, ರಾಧಾ ಆತನ ಆತ್ಮವಾಗಿ ಉಳಿಯುತ್ತಾಳೆ. ಇದೇ ಕನ್ಸೆಪ್ಟ್ ಇಟ್ಟುಕೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಲಾಗಿದೆ” ಎಂದರು. ಚಿತ್ರದ ನಾಯಕ ಭರತ್ ಕುಮಾರ್ (ಶಿಲ್ಪಾ ಶ್ರೀನಿವಾಸ್ ಪುತ್ರ) ಮಾತನಾಡಿ, “ರುಕ್ಮಿಣಿಗೂ ಕೃಷ್ಣನಿಗೂ ಮಧ್ಯೆ ಇರುವ ಆತ್ಮವೇ ರಾಧಾ. ಈ ಪಾತ್ರಕ್ಕೆ ‘ಪಾರು’ ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಸೂಕ್ತ ಎಂದು ನಮ್ಮ ತಾಯಿ ಸಲಹೆ ನೀಡಿದ್ದರು” ಎಂದು ನೆನಪಿಸಿಕೊಂಡರು.

ಶೇಕಡಾ 90 ರಷ್ಟು ಚಿತ್ರೀಕರಣ ಮುಕ್ತಾಯ
ಚಿತ್ರದ ನಿರ್ಮಾಪಕ ಉಮೇಶ್ ಅವರು ಮಾಹಿತಿ ನೀಡಿ, ಸಿನಿಮಾದ ಶೇಕಡಾ 90 ರಷ್ಟು ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ಕೇವಲ ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ವಿಭಿನ್ನ ಸ್ಟೋರಿಲೈನ್ ಹಾಗೂ ಅದ್ಭುತ ತಾರಾಗಣ ಹೊಂದಿರುವ ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ.