KANNAD UNIVERSITY:ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನ ವಿದ್ಯಾರ್ಥಿ ಶಾಂತವ್ವ ಎಸ್, ಪಮ್ಮಾರಗೆ ಕನ್ನಡ ವಿವಿ ಪಿಹೆಚ್ಡಿ ಪದವಿ ಘೋಷಿಸಿದೆ.
ವಿಜಯನಗರ, ಜು.23: ಚಿಕ್ಕ ಬನ್ನಿಗೋಳ ತಾಂಡಾದ ಶಾಂತವ್ವ ಎಸ್, ಪಮ್ಮಾರಗೆ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್. ಡಿ ಪದವಿ ಲಭಿಸಿದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಶೋಧನ ವಿದ್ಯಾರ್ಥಿ ಶಾಂತವ್ವ ಎಸ್, ಪಮ್ಮಾರಗೆ ಕನ್ನಡ ವಿವಿ ಪಿಹೆಚ್ಡಿ ಪದವಿ ಘೋಷಿಸಿದೆ.
ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಡಾ. ವಾಸುದೇವ ಬಡಿಗೇರ ಅವರ ಮಾರ್ಗದರ್ಶನದಲ್ಲಿ “ಹೈದರಾಬಾದ್ ಕರ್ನಾಟಕದ ವಿಮೋಚನಾ ಚಳುವಳಿ : ಸಾಂಸ್ಕೃತಿಕ ಅಧ್ಯಯನ (ಸ್ಮಾರಕಗಳನ್ನು ಅನುಲಕ್ಷಿಸಿ) ಎಂಬ ವಿಷಯದಡಿಯಲ್ಲಿ ಸಂಶೋಧನೆ ಕೈಗೊಂಡು ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಪ್ ಫಿಲಾಸಪಿ ಪದವಿ ಘೋಷಿಸಿದೆ ಎಂದು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಪಿಹೆಚ್ಡಿ ಪದವಿ ಪಡೆದ ಶಾಂತವ್ವ ಎಸ್.ಪಮ್ಮಾರ ಅವರಿಗೆ ಸಮಾಜ ವಿಜ್ಞಾನ ನಿಕಾಯದ ಡೀನರಾದ ಡಾ. ಎಚ್. ಡಿ. ಪ್ರಶಾಂತ, ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ನಾಯಕ, ಡಾ. ಎಸ್. ವೈ. ಸೋಮಶೇಖರ್, ಡಾ. ಗೋವಿಂದ, ಸಿಬ್ಬಂದಿ ವರ್ಗ ಮತ್ತು ಕುಟುಂಬ ವರ್ಗ ಹಾಗೂ ಸ್ನೇಹಿತರು ಅಭಿನಂದಿಸಿದ್ದಾರೆ. ಕುಗ್ರಾಮ ಚಿಕ್ಕ ಬನ್ನಿಗೋಳ ತಾಂಡಾದ ನಿವಾಸಿ ಶಾಂತವ್ವ ಸಾಧನೆಗೆ ಕುಟುಂಬದಲ್ಲಿ ಸಂತೋಷ ಮನೆಮಾಡಿದ್ದು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
