COMMONWELTH GAMES:ಕನ್ನಡತಿ ಕೆ. ಶಿಲ್ಪಾ ಕಂಚಿನ ಪದಕಕ್ಕೆ ಭಾಜನ. ಮೈಸೂರು ಜಿಲ್ಲೆ ಕೆ.ಆರ್. ನಗರದ ಕಂಚುಗಾರನಕೊಪ್ಪಲು ಗ್ರಾಮದ ಶಿಲ್ಪಾ, ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾರೆ. 
ಗ್ಲಾಸ್ಗೋ(ಸ್ಕಾಟ್ಲ್ಯಾಂಡ್), ಜು.28: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ವನಿತಾ ಪ್ಯಾರಾ ಅಥ್ಲೀಟ್ಗಳು ಅತ್ಯದ್ಭುತ ಸಾಧನೆ ಮಾಡಿದ್ದಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಇಬ್ಬರು ಕ್ರೀಡಾಪಟುಗಳು ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಪ್ಯಾರಾ ಶಾಟ್ಪುಟ್ F57 ಸ್ಪರ್ಧೆಯಲ್ಲಿ ಶರ್ಮಿಳಾ ಚಿನ್ನದ ಪದಕವನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಕನ್ನಡತಿ ಕೆ. ಶಿಲ್ಪಾ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. 7.26 ಮೀಟರ್ ಗುಂಡು ಎಸೆದು ಪದಕ ಗೆದ್ದಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರದ ಕಂಚುಗಾರನಕೊಪ್ಪಲು ಗ್ರಾಮದ ಶಿಲ್ಪಾ, ನಾಲ್ಕನೇ ವಯಸ್ಸಿನಲ್ಲಿ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಬಡ ರೈತ ಕುಟುಂಬದ ಹಿನ್ನೆಲೆಯ ಹೊರತಾಗಿಯೂ, ಅವರು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾರೆ.
ಈ ಇಬ್ಬರು ಪ್ಯಾರಾ ಅಥ್ಲೀಟ್ಗಳ ಸಾಧನೆ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹದ್ದು, ಕ್ರೀಡಾಕೂಟದಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ.
