VPL-2026 Cricket: ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತಿ ದೊಡ್ಡ ಕ್ರಿಕೆಟ್ ಹಬ್ಬ: ಆಗಸ್ಟ್ 6, 7, 8 ಮತ್ತು 9 ರಂದು 4 ದಿನಗಳ ಕಾಲ ಚಿತ್ರದುರ್ಗದ ಹಳೆಯ ಪ್ರೌಢಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನಾಲಯ ಕಾಲೇಜು ಮೈದಾನದಲ್ಲಿ ವಿಪಿಎಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ.
ಚಿತ್ರದುರ್ಗ, ಜು.30: ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ (ರಿ) ಆಶ್ರಯದಲ್ಲಿ ಕರ್ನಾಟಕ ರಾಜ್ಯಾದ್ಯಂತ ಇರುವ ವಿಶ್ವಕರ್ಮ ಸಮುದಾಯದ ಆಟಗಾರರಿಗಾಗಿ “ವಿಶ್ವಕರ್ಮ ಪ್ರೀಮಿಯರ್ ಲೀಗ್ (VPL) – 2026” ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷರಾದ ಎಮ್. ಶಂಕರಮೂರ್ತಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮೊತ್ತದ ಬಹುಮಾನಗಳನ್ನು ಒಳಗೊಂಡ ಕ್ರೀಡಾಕೂಟ ಇದಾಗಿದೆ ಎಂದರು. ಆಗಸ್ಟ್ 6, 7, 8 ಮತ್ತು 9 ರಂದು 4 ದಿನಗಳ ಕಾಲ ಚಿತ್ರದುರ್ಗದ ಹಳೆಯ ಪ್ರೌಢಶಾಲಾ ಆವರಣ ಹಾಗೂ ಸರ್ಕಾರಿ ವಿಜ್ಞಾನಾಲಯ ಕಾಲೇಜು ಮೈದಾನದಲ್ಲಿ ಜರುಗಲಿದೆ. ಮಧು ಡೈಮಂಡ್ಸ್ ಈ ಕ್ರೀಡಾಕೂಟದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದೆ.
ಕ್ರಿಕೆಟ್ ಟೂರ್ನಿಯಲ್ಲಿ ಗೆದ್ದ ಮೊದಲ ತಂಡಕ್ಕೆ ಪ್ರಥಮ ಬಹುಮಾನವಾಗಿ 2,00,000 ರೂ.; ದ್ವಿತೀಯ ಬಹುಮಾನ: ₹ 1,00,000ರೂ. , 3ನೇ ಹಾಗೂ 4ನೇ ಸ್ಥಾನ ಪಡೆದ ತಂಡಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಸರಣಿ/ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ‘ಹೋಂಡಾ ಶೈನ್ 100 ಸಿಸಿ’ ಬೈಕ್ ನೀಡಲಾಗುವುದು.
ರಾಜ್ಯ ಕಾಂಗ್ರೆಸ್ ಕುಶಲಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ಅವರು, ಸಮುದಾಯದ ಯುವಕರಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಈ ಟೂರ್ನಿ ಅತ್ಯುತ್ತಮ ವೇದಿಕೆಯಾಗಿದೆ ಎಂದರು.
ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿಯ ಉಪಾಧ್ಯಕ್ಷರು, ವಿಶ್ವಕರ್ಮ ಸಮಾಜ ಅಭಿವೃದ್ಧಿ ಸಂಘದ ಚಳ್ಳಕೆರೆ ಉಪಾಧ್ಯಕ್ಷರಾದ ಶ್ರೀಧರ ಚಾರಿ, ಚಿತ್ರದುರ್ಗ ವಿಶ್ವಕರ್ಮ ಯುವ ಘಟಕದ ಅಧ್ಯಕ್ಷರಾದ ಡಿ.ಆರ್. ಸಂಜಯ್, ಮುಖಂಡರಾದ ಎನ್.ಪ್ರವೀಣ್, ಶ್ರೀನಿವಾಸ್, ಶ್ರೀನಿವಾಸಚಾರ್ ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
