Ranbir Kapoor: “I have never seen a hard worker like Rocky Bhai,” said Ranbir Kapoor! – ರಾಮಾಯಣ ಚಿತ್ರದ ರಾಮನ ಪಾತ್ರಧಾರಿ ರಬೀರ್ ಕಪೂರ್ ಸಖತ್ ಆಗಿಯೇ ಮಾತನಾಡಿದ್ದಾರೆ. ರಾವಣ ಪಾತ್ರಧಾರಿ ರಾಕಿಂಗ್ ಸ್ಟಾರ್ ಯಶ್ ಅದೆಷ್ಟು ಗ್ರೇಟ್ ಅಂತ ಹೇಳಿಕೊಂಡಿದ್ದಾರೆ. ಈ ರೀತಿಯ ಸೂಪರ್ ಸ್ಟಾರ್ನನ್ನ ನಾನು ನೋಡಿಯೇ ಇಲ್ಲ ಅಂತಲೂ ಹೊಗಳಿದ್ದಾರೆ. ಈ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ ಅವರನ್ನ ಮೊದಲು ಗೋವಾದಲ್ಲಿ ನೋಡಿದ್ದೇನೆ. ನಮಿತ್ ಮಲ್ಹೋತ್ರಾ ಜೊತೆಗೆ ಇವರೂ ಇದ್ದರು. ಆಗಲೆ ಇವರ ಬಗ್ಗೆ ತಿಳಿದುಕೊಂಡಿದ್ದೇನೆ. ಕೆಜಿಎಫ್ ಎರಡೂ ಸರಣಿ ಚಿತ್ರ ನೋಡಿದ್ದೇನೆ. ಇವರ ಕೆಲಸ ಮಾಡೋ ರೀತಿ ನನಗೆ ಇಷ್ಟ ಆಗಿದೆ. ಇವರೊಬ್ಬ ಸೂಪರ್ ಸ್ಟಾರ್ ಅಷ್ಟೇ ಅಲ್ಲ. ಎಲ್ಲವೂ ಆಗಿದ್ದಾರೆ. ಇವರನ್ನ ಒಂದೇ ಮಾತಿನಲ್ಲಿ ಹೇಳೊದಾದರೇ? ಇವರು “ಸಿನಿಮಾ ಮ್ಯಾನ್” ಅಂತಲೇ ರಣಬೀರ್ ಕಪೂರ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಯಶ್ “ಸಿನಿಮಾ ಮ್ಯಾನ್” ನೋಡಿ
ರಣಬೀರ್ ಕಪೂರ್ ಈ ಮಾತು ಹೇಳಿದ್ದಾರೆ. ಯಶ್ ಬಾಸ್ ಅಂತಲೇ ರಣಬೀರ್ ಕೂಡ ಕರೆಯುತ್ತಾರೆ. ಟಾಲಿವುಡ್ನಲ್ಲಿ ನಡೆದ ರಾಮಾಯಣ ಚಿತ್ರದ ಪ್ರೀ-ರಿಲೀಸ್ ಇವೆಂಟ್ ವೇದಿಕೆ ಮೇಲೆ ರಣಬೀರ್ ಈ ಮಾತು ಹೇಳಿಕೊಂಡಿದ್ದಾರೆ.

ಗೋವಾದಲ್ಲಿ ಯಶ್ ಅವರನ್ನ ಮೀಟ್ ಆಗಿದ್ದೇನೆ. ರಾಮಾಯಣ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆಗೆ ಇವರಿದ್ದರು. ಆಗಲೇ ಯಶ್ ಅವರನ್ನ ನಾನು ನೋಡಿದ್ದೇನೆ. ಇವರು ಒಬ್ಬ ಸೂಪರ್ ಸ್ಟಾರ್ ಅಷ್ಟೇ ಅಲ್ಲ. ಕಂಪ್ಲೀಟ್ ಒಬ್ಬ ಸಿನಿಮಾ ಮ್ಯಾನ್ ಆಗಿದ್ದಾರೆ.
ಯಶ್ ಬಾಸ್ಗೆ ಎಲ್ಲ ಗೊತ್ತು..?: ರಾಕಿಂಗ್ ಸ್ಟಾರ್ ಯಶ್ ಅವರಿಗೆ ಎಲ್ಲ ಗೊತ್ತಿದೆ. ನಟನೆ, ನಿರ್ದೇಶನ, ಬರವಣಿಗೆ, ಸಿನಿಮಾವನ್ನ ಹೇಗೆ ಮಾಡ್ಬೇಕು, ಅದನ್ನ ಹೇಗೆ ಮಾರ್ಕೆಟ್ ಮಾಡ್ಬೇಕು. ಹೀಗೆ ಎಲ್ಲವೂ ಯಶ್ ಬಾಸ್ಗೆ ಗೊತ್ತಿದೆ.
ರಾಮಾಯಣ ಸಿನಿಮಾದಲ್ಲಿ ಕೆಲಸ ಮಾಡ್ತಾನೇ ಇದು ತಿಳಿಯಿತು. ಇವರಂತ ಕಲಾವಿದರನ್ನ ನಾನು ನೋಡಿಯೇ ಇಲ್ಲ ಅಂತಲೇ ರಣಬೀರ್ ಕಪೂರ್ ಬಣ್ಣಿಸಿದ್ದಾರೆ.
ಸಾಯಿ ಪಲ್ಲವಿ ಹೇಳಿದ್ದೇನು
ಯಶ್ ಬಗ್ಗೆ ಸಾಯಿ ಪಲ್ಲವಿ ಕೂಡ ಮಾತನಾಡಿದ್ದಾರೆ. ಯಶ್ ಅಂದ್ರೆ ಸುಮ್ನೆ ಅಲ್ಲ. ಅವರು ತಾವು ಎಲ್ಲಿಂದ ಬಂದಿರೋದು ಅನ್ನೋದನ್ನ ಮರೆತಿಲ್ಲ. ಎಲ್ಲೆ ಹೋದ್ರೂ ಅಷ್ಟೇನೆ. ತಮ್ಮ ಭಾಷೆಗೆ, ತಮ್ಮ ಇಂಡಸ್ಟ್ರಿಗೆ ಗೌರವ ಕೊಟ್ಟಿದ್ದಾರೆ. ಇಡೀ ಇಂಡಸ್ಟ್ರೀಯನ್ನ ಬೆಳೆಸಬೇಕು ಅಂತಲೇ ಕನಸು ಕಾಣುತ್ತಾರೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಕೂಡ ಹಾಗೆ ಇರೋದು ಅಂತಲೇ ಸಾಯಿ ಪಲ್ಲವಿ ಹೇಳಿಕೊಂಡಿದ್ದಾರೆ.
ಸಾಯಿ ಬಗ್ಗೆ ರಾಕಿ ಭಾಯ್ ಮಾತು
ಸಾಯಿ ಪಲ್ಲವಿ ಅವರು ವಿಶೇಷವಾಗಿಯೇ ಇದ್ದಾರೆ. ಇವರನ್ನ ನಾನು ಪಲ್ಲವಿ ಅಂತಲೆ ಕರೆಯುತ್ತೇನೆ. ಸೀತಾ ಮಾತೆಯ ಪಾತ್ರಕ್ಕೆ ಇವರು ಸೂಕ್ತವಾಗಿದ್ದಾರೆ.


