Dhanveer-Vijayalakshmi: Darshan Banta vs Vijayalakshmi fight; Another complaint against actor Dhanveer! What is a fraud case? – ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್ ನಡುವಿನ ಕಿತ್ತಾಟದ ನಡುವೆಯೇ ಧನ್ವೀರ್ಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಯಾರಿಗೆ ವಂಚಿಸಿದ್ದಾರೆ ನಟ ಧನ್ವೀರ್?

ಬೆಂಗಳೂರು ಅ.23: ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಫೈಟ್ ಇದೀಗ ಬೀದಿಗೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ಧನ್ವೀರ್ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ವಂಚನೆ ಆರೋಪ ಸಹ ಕೇಳಿ ಬಂದಿದೆ. ನಟ ಧನ್ವೀರ್ ವಿರುದ್ಧ 5 ಲಕ್ಷ ವಂಚಿದ ಆರೋಪ ಕೇಳಿ ಬಂದಿದೆ. ದೂರು ಕೊಟ್ಟಿದ್ದು ಯಾರ? ಏನಿದು ವಂಚನೆ ಕೇಸ್?
ಧನ್ವೀರ್ ವಿರುದ್ಧ 5 ಲಕ್ಷ ವಂಚನೆ ಆರೋಪ : ವಿಜಯಲಕ್ಷ್ಮಿ ದರ್ಶನ್ ಹಾಗೂ ನಟ ಧನ್ವೀರ್ ನಡುವಿನ ಕಿತ್ತಾಟದ ನಡುವೆಯೇ ಧನ್ವೀರ್ಗೆ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ವಿಮಾನ ಟಿಕೆಟ್ಗೆ ಬುಕ್ ಮಾಡಿಸಿ 5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ದ ಬ್ಯಾಟರಾಟಯನಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಧನ್ವೀರ್ ವಿರುದ್ಧ ಸ್ನೇಹಿತನೇ ಕೊಟ್ಟ ದೂರು! : ಧನ್ವೀರ್ ಸ್ನೇಹಿತ ಗೌತಮ್ ವಂಚನೆಗೊಳಗಾಗಿದ್ದು, ಈ ಸಂಬಂಧ ನಟ ಧನ್ವೀರ್ ಹಾಗೂ ಆತನ ಸ್ನೇಹಿತ ಶಶಿ ಮೇಲೆ ಪೊಲೀಸರು ಕೊಟ್ಟಿದ್ದಾರೆ. ಈ ದೂರಿನ ಆಧರಿಸಿ ಕೂಡ ಗಂಭೀರ ಸ್ವರೂಪವಲ್ಲ ಕೃತ್ಯ ಎಂದು ಪೊಲೀಸರು ಪರಿಗಣಿಸಿದ್ದಾರೆ. ಹಲವು ವರ್ಷಗಳಿಂದ ನನಗೆ ಧನ್ವಿರ್ ಹಾಗೂ ಶಶಿ ಪರಿಚಿತರು. ಈ ಸ್ನೇಹದಲ್ಲಿ 5 ಲಕ್ಷ ರು.ವರೆಗೆ ವಿಮಾನ ಟಿಕೆಟ್ಗಳನ್ನು ಅವರು ಬುಕ್ ಮಾಡಿಸಿದ್ದರು. ಅಲ್ಲದೆ ನನ್ನ ಕಾರನ್ನು ಸಹ ಧನ್ವಿರ್ ಪಡೆದಿದ್ದಾರೆ. ಆದರೆ ವಿಮಾನ ಟಿಕೆಟ್ ಗಳಿಗೆ ವ್ಯಯಿಸಿದ ಲಕ್ಷ ರು. ಹಣ ಹಾಗೂ ಕಾರನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಗೌತಮ್ ಆರೋಪಿಸಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.
ಇತ್ತ ಧನ್ವೀರ್ v/s ವಿಜಯಲಕ್ಷ್ಮಿ ಫೈಟ್ : ತಮ್ಮ ಮೊಬೈಲ್ಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿದ್ದಾರೆ ಎಂದು ಆರೋಪಿಸಿ ನಟ ಧನ್ವೀರ್ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಪಿಎ ನಾಗರಾಜ್ ದೂರು ನೀಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಧನ್ವೀರ್ ನಡುವಿನ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇತ್ತ ಧನ್ವೀರ್ ತಂದೆಯಿಂದ ಪ್ರತಿದೂರು! : ಧನ್ವೀರ್ ವಿರುದ್ಧ ದೂರುಗಳು ದಾಖಲಾದ ಬೆನ್ನಲ್ಲೇ ಪ್ರತಿಯಾಗಿ ದರ್ಶನ್ ಪತ್ನಿ ಹಾಗೂ ಅವರ ವ್ಯವಸ್ಥಾಪಕನ ಮೇಲೆ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತಮ್ಮ ಮನೆಗೆ ನುಗ್ಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಅವರ ವ್ಯವಸ್ಥಾಪಕ ನಾಗರಾಜ್, ಭೋಜ ಹಾಗೂ ಬಟಾಲಿ ಪ್ರಮೋದ್ ಬೆದರಿಸಿದ್ದಾರೆ ಎಂದು ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ.
ಕೊಲೆ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದಾಗಿನಿಂದಲೂ ಕುಟುಂಬದ ಜೊತೆಗಿದ್ದ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವೆ ಮನಸ್ತಾಪ ಉಂಟಾಗಿದೆ.
