The 22nd anniversary of Gana Saurabha Yakshagana School was celebrated with great pomp and show – Yakshagana School Anniversary : ಯಕ್ಷಗಾನ ಗುರು ಬೇಗಾರ್ ಶಿವಕುಮಾರ್ ಅವರು ಮುನ್ನಡೆಸುವ ಗಾನಸೌರಭ ಯಕ್ಷಗಾನ ಶಾಲೆಯ 22ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆದಿದೆ. ನಗರದ ನಾಗರಭಾವಿಯ ಅಮ್ಮೆಂಬಲ್ ಸುಬ್ಬರಾವ್ ಪೈ ಸ್ಮಾರಕ ಕಲಾಮಂಟದಲ್ಲಿ ಈ ಕಾರ್ಯಕ್ರಮ ನಡೆದಿದೆ.
- ಕಲಾಪೋಷಕ ಪುರಸ್ಕಾರವನ್ನು, ವಾಣಿಜ್ಯೋದ್ಯಮಿ ಕರುಣಾಕರ ಹೆಗ್ಡೆ ಅವರಿಗೆ ನೀಡಿ ಪುರಸ್ಕರಿಸಲಾಯಿತು.
- ಬೆಂಗಳೂರಲ್ಲಿ ಸಾವಿರಾರು ಪ್ರದರ್ಶನಗಳನ್ನು ಕೊಟ್ಟವರು ಗುರು ಬೇಗಾರ್ ಶಿವಕುಮಾರ್.
- ನಾಗರಭಾವಿಯ ಅಮ್ಮೆಂಬಳ ಸುಬ್ಬರಾವ್ ಪೈ ಸ್ಮಾರಕ ಕಲಾಮಂಟಪದಲ್ಲಿ ನಡೆದ ಕಾರ್ಯಕ್ರಮ.
![]()
ಬೆಂಗಳೂರು: ‘ಯಕ್ಷಗಾನಂ ವಿಶ್ವಗಾನಂ’ ಎಂಬ ಆಶಯದೊಂದಿಗೆ ಮಹಾನಗರ ಬೆಂಗಳೂರಲ್ಲಿ ಯಕ್ಷಗಾನ ಪರಂಪರೆಯನ್ನು ಹೊಸ ಪೀಳಿಗೆಗೂ ಧಾರೆ ಎರೆದು ಕಲೆಯ ಪ್ರಸಾರವನ್ನು ಹೆಚ್ಚಿಸುತ್ತಾ ಬಂದಿದೆ ಗಾನಸೌರಭ ಯಕ್ಷಗಾನ ಶಾಲೆ . ಬರೋಬ್ಬರಿ 22 ವರ್ಷಗಳ ಯಕ್ಷಗಾನ ತರಗತಿ ಮಾಡಿ, ಬೆಂಗಳೂರಲ್ಲಿ ಸಾವಿರಾರು ಪ್ರದರ್ಶನಗಳನ್ನು ಕೊಟ್ಟವರು ಗುರು ಬೇಗಾರ್ ಶಿವಕುಮಾರ್ .
ನಗರದ ನಾಗರಭಾವಿಯ ಅಮ್ಮೆಂಬಳ ಸುಬ್ಬರಾವ್ ಪೈ ಸ್ಮಾರಕ ಕಲಾಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ, ಶಾಲೆಯ 22 ನೇ ವಾರ್ಷಿಕೋತ್ಸವ ಅದ್ಧೂರಿಯಾಗಿ ಜರುಗಿತು. ಗಾನಸೌರಭ ಶಾಲೆಯ ಹಿರಿಯ-ಕಿರಿಯ ವಿದ್ಯಾರ್ಥಿಗಳು ಮೀನಾಕ್ಷಿ ಕಲ್ಯಾಣ, ಸುದರ್ಶನ ಗರ್ವಭಂಗ, ಶಕಟಾಧಿಗಳ ವಧೆ ಹಾಗೂ ಕಂಸ ವಧೆ ಎಂಬ ನಾಲ್ಕು ಪ್ರಸಂಗಗಳನ್ನು ಅಚ್ಚುಕಟ್ಟಾಗಿ ಪ್ರದರ್ಶನ ನೀಡಿದರು.
ಕಲಾಪೋಷಕ ಪುರಸ್ಕಾರ ಪ್ರಧಾನ : ವಾರ್ಷಿಕೋತ್ಸವದ ಸಂಭ್ರಮದ ಹಿನ್ನೆಲೆ, ‘ಕಲಾಪೋಷಕ ಪುರಸ್ಕಾರವನ್ನು, ವಾಣಿಜ್ಯೋದ್ಯಮಿ ಕರುಣಾಕರ ಹೆಗ್ಡೆ ಅವರಿಗೆ ನೀಡಿ ಪುರಸ್ಕರಿಸಲಾಯಿತು. ಹಾಗೂ ಗಾನಸೌರಭ ದಂಪತಿ ಅಭಿನಂದನಾ ಪುರಸ್ಕಾರವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ರೀ ಕೋಟ ಸುರೇಶ್ ಬಂಗೇರ ಅವರಿಗೆನೀಡಿ ಗೌರವಿಸಲಾಯಿತು.
ಇನ್ನು ಗಾನಸೌರಭ ಸನ್ಮಾನವನ್ನು ತೆಂಕುತಿಟ್ಟಿನ ಕಲಾವಿದರಾದ ನಿಡುವಜೆ ಗೋಪಾಲಕೃಷ್ಣ ಭಟ್, ಬಡಗು ತಿಟ್ಟು ಕಲಾವಿದರು ಹಾಗೂ ಯಕ್ಷಗಾನ ಗುರುಗಳಾಧ ಡಾ.ರಾಧಾಕೃಷ್ಣ ಉರಾಳರಿಗೆ ಸನ್ಮಾನಿಸಿ ಗೌರವಿಸಲಾಯಿತು.
“ಡಿಜಿಟಲ್ ಯುಗದಲ್ಲಿಯೂ ಕಲೆ, ಸಂಸ್ಕೃತಿ, ಪರಂಪರೆ ಹಾಗೂ ಜ್ಞಾನವನ್ನು ವಿಸ್ತರಿಸುವ ಯಕ್ಷಗಾನವನ್ನು ಕಲಿಯಲು ಪ್ರೋತ್ಸಾಹಿಸುತ್ತಿರುವ ಪೋಷಕರು , ವಿದ್ಯಾರ್ಥಿಗಳು ಹಾಗೂ ಕಲಾಭಿಮಾನಿಗಳಿಗೆ ಧನ್ಯವಾದ” ಎಂದು ಯಕ್ಷಗಾನ ಗುರು ಬೇಗಾರ್ ಶಿವಕುಮಾರ್ ತಿಳಿಸಿದ್ದಾರೆ.
