ಬಾಗಲಕೋಟೆಯಲ್ಲಿ ಪ್ರಾಂಶುಪಾಲರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಶಾಲೆಗೆ ಮೂಲಸೌಕರ್ಯ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಮುಖ್ಯ ಶಿಕ್ಷಕಿ ಜಾತಿತಾರತಮ್ಯ ಮಾಡುತ್ತಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಇಲ್ಲ, ತರಗತಿ ಕೊಠಡಿಗಳಲ್ಲಿ ಸರಿಯಾದ ಗಾಳಿ ಮತ್ತು ಶೌಚಾಲಯ ಇಲ್ಲದೆ ನೈರ್ಮಲ್ಯದ ಕೊರತೆ ಹೆಚ್ಚಾಗಿದೆ. ಎಂಎಸ್ ಬಡದಾನಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮುಖ್ಯಶಿಕ್ಷಕಿ ಗೀತಾ ಕಾಪಸೆ ವಿರುದ್ಧ ಬಾಲಕರು ಮತ್ತು ಬಾಲಕಿಯರು ಪ್ರತಿಭಟನೆ ನಡೆಸಿದರು.
ಶಾಲೆಯಿಂದ ನವನಗರ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮುಖ್ಯ ಶಿಕ್ಷಕಿಯನ್ನು ಕೂಡಲೇ ವರ್ಗಾ ವಣೆ ಮಾಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಬ್ಲಾಕ್ ಶೀಕ್ಷಣಾಧಿಕಾರಿ, ಎಂಎಸ್ ಬಡದಾನಿ ಶಾಲೆಗೆ ಭೇಟಿ ನೀಡಿ ದೂರು ಸ್ವೀಕರಿಸಿದರು.
ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಇಲ್ಲ, ತರಗತಿ ಕೊಠಡಿಗಳಲ್ಲಿ ಸರಿಯಾದ ಗಾಳಿ ಮತ್ತು ಶೌಚಾಲಯ ಇಲ್ಲದೆ ನೈರ್ಮಲ್ಯದ ಕೊರತೆ ಹೆಚ್ಚಾಗಿದೆ. ಮದ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥ ಮೊಟ್ಟೆ, ಬಾಳೆಹಣ್ಣಿ ನ ವಿತರಣೆಯಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದರು.
