ಹಣ ಕೇಳಲು ಹೋದ ಯುವಕನ ಮೇಲೆ ಕ್ರೂರತ್ವ ಮೆರೆದ ಸ್ನೇಹಿತ

ಬೆಳಗಾವಿ: ಸ್ನೇಹಿತನ ಬಳಿ ಹಣ ಕೇಳಲು ಹೋದ ಯುವಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ.ಬೆಳಗಾವಿ ತಾಲ್ಲೂಕಿನ ಬಿ.ಕೆ. ಕಂಗ್ರಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ನ್ಯೂ ವೈಭವ್ ನಗರದ ನಿವಾಸಿ ಸೊಹೈಲ್ ಅತ್ತಾರ್ (24) ಮೇಲೆ ಹಲ್ಲೆ ನಡೆಸಲಾಗಿದೆ. ಸ್ನೇಹಿತನ ಬಳಿ ನೀಡಿದ್ದ ಹಣವನ್ನು ಕೇಳಲು ಹೋದಾಗ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಹತ್ತಕ್ಕೂ ಹೆಚ್ಚು ಯುವಕರ ಮೇಲೆ ಹಲ್ಲೆ ಆರೋಪವಿದೆ.ಸಂತ್ರಸ್ತನನ್ನು ಬೆಳಗಾವಿ ಬಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
