ಏಷ್ಯಾ ಕಪ್ ಗೆ ಭಾರತ ತಂಡದಿಂದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಪ್ರಕಟಣೆ : ಗಿಲ್ ಗೆ ಉಪನಾಯಕನ ಸ್ಥಾನ !


ಕ್ರೀಡೆ: ಏಷ್ಯಾ ಕಪ್ ಕ್ರೀಡಾ ಕೂಟಕ್ಕೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ಮತ್ತು ಉಪ ನಾಯಕನಾಗಿ ಗಿಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಯಾವ ಯಾವ ಆಟಗಾರರು ಈ ತಂಡದಲ್ಲಿ ಇದ್ದಾರೆ ಹಾಗು ಯಾರನ್ನೆಲ್ಲ ಭಾರತ ತಂಡದಿಂದ ಕೈ ಬಿಡಲಾಗಿದೆ ಎಂದು ನೋಡೋಣ ಬನ್ನಿ.ಸೆಪ್ಟಂಬರ್ ನಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರೀಡಾಕೂಟಕ್ಕೆ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವನ್ನು ಪ್ರಕಟಿಸಿದ್ದಾರೆ . ಶುಭಮನ್ ಗಿಲ್ ಅವರಿಗೆ ಉಪನಾಯಕನ ಸ್ಥಾನ ನೀಡಲಾಗಿದ್ದು, ಅಭಿಶೇಕ್ ಶರ್ಮಾ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಸಂಜು ಸಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಮಂಗಳವಾರ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಂಡವನ್ನು ಅಂತಿಮಗೊಳಿಸಿದೆ. ಈ ಬಾರಿಯ ಏಷ್ಯಾಕಪ್ ಕೂಟವು ಸೆ.9ರಿಂದ 28ರವರೆಗೆ ಯುಎಇ ನಲ್ಲಿ ನಡೆಯಲಿದೆ.
ಭಾರತ ತಂಡ: ಸೂರ್ಯ ಕುಮಾರ್ ಯಾದವ್ , ಶುಭಮನ್ ಗಿಲ್ , ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ,ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ,ಜಿತೇಶ್ ಶರ್ಮಾ, ಶಿವಂ ದುಬೆ, ಅರ್ಷ್ದೀಪ್ ಸಿಂಗ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ, ತಿಲಕ್ ವರ್ಮಾ, ರಿಂಕು ಸಿಂಗ್, ವರುಣ್ ಚಕ್ರವರ್ತಿ ಹಾಗೂ ಕುಲದೀಪ್ ಯಾದವ್ ಆಡಲಿದ್ದಾರೆ.
