ಅರಣ್ಯ ಇಲಾಖೆ ಕಾರ್ಯಾಚರಣೆಯಿಂದ ಚಿರತೆ ಸೆರೆ

ಚಿತ್ರದುರ್ಗ : ಇತ್ತೀಚೆಗೆ ಗಿಲಿಕೆನಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಎರಗಿದ್ದ ಚಿರತೆಯ ಜಾಡನ್ನು ಹಿಡಿದು ಕೊನೆಗೂ ಭಾನುವಾರ ರಾತ್ರಿ 12 ಗಂಟೆಯಲ್ಲಿ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಗ್ರಾಮದ ಹೊರವಲಯದ ಹಸುವನ್ನು ತಿನ್ನಲು ಬಂದಿದ್ದ ಚಿರತೆಯನ್ನು ಬೋನಿಗೆ ಕೆಡವಲು ಹರಸಹಾಸ ಪಟ್ಟ ಅರಣ್ಯ ಇಲಾಖೆ .ಇತ್ತೀಚೆಗೆ ಗಿಲಿಕೆನಹಳ್ಳಿಯ ಮಹಿಳೆ ಮೇಲೆ ಎರಗಿದ್ದ ಚಿರತೆಯ ಜಾಡು ಹಿಡಿದು ಕೊನೆಗೂ ಬಂಧಿಸಿದ್ದಾರೆ .ಚಿರತೆ ಹಸುವನ್ನು ತಿನ್ನಲು ದಾಳಿ ಮಾಡಿದ ಸುದ್ದಿ ತಿಳಿದ ತಕ್ಷಣ ತಡರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಯಿತು.ಸುಮಾರು 6 ವರ್ಷ ವಯಸ್ಸಿನ ಚಿರತೆ ಅರಣ್ಯ ಇಲಾಖೆ ವಶದಲ್ಲಿದ್ದು ಶೀಘ್ರದಲ್ಲೇ ಭದ್ರಾವತಿ ಅರಣ್ಯ ಪ್ರದೇಶಕ್ಕೆ ಸಾಗಿಸಲು ಅಧಿಕಾರಿಗಳ ಪರವಾನಿಗೆ ಕಾಯುತ್ತಿರುವ ತಾಲೂಕ ಅರಣ್ಯ ಇಲಾಖೆ ಅಧಿಕಾರಿಗಳು.
