ಧರ್ಮಸ್ಥಳ ಬಗ್ಗೆ ಷಡ್ಯಂತ್ರ ನಡೆಯುವುದಿಲ್ಲ: ಸಾ.ರಾ ಮಹೇಶ್ ಹೇಳಿಕೆ

ಕೊಡಗು:ಮಾಜಿ ಸಚಿವ ಸಾ.ರಾ ಮಹೇಶ್ ಇಂದು 500 ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಧರ್ಮಸ್ಥಕ್ಕೆ ಪಯಣ ಬೆಳೆಸಿದ್ರು ಈ ಸಂಧರ್ಭದಲ್ಲಿ ಮಾರ್ಗಮಧ್ಯ ಶನಿವಾರಸಂತೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಧರ್ಮಸ್ಥಳವು ಪುಣ್ಯಸ್ಥಳ, ಈ ದೇವಾಲಯದ ಬಗ್ಗೆ ಯಾರೇ ಷಡ್ಯಂತ್ರ ನಡೆಸಿದರು ಅದು ನಡೆಯುವುದಿಲ್ಲ, ಈ ಚಿನ್ನಯ್ಯನ ಹಿಂದೆ ಯಾರು ಯಾರು ಇದ್ದಾರೆ ಎಂದು ತನಿಖೆ ಮುಂದುವರಿಯಬೇಕು. ಎಸ್ಐಟಿ ರಚನೆ ಮಾಡುವವರೆಗೆ ಯಾರು ಮಾತನಾಡಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ಈ ರಚನೆ ಮಾಡಿದ್ದರಿಂದ ಎಲ್ಲಾ ಸತ್ಯಾಸತ್ಯತೆ ಹೊರ ಬರುತ್ತಿದೆ.ನಾನು ಈ ಧರ್ಮಸ್ಥಳದ ಭಕ್ತ ಹಾಗೂ ಒಬ್ಬ ಜನಪ್ರತಿನಿದಿಯಾಗಿ ಈ ಪುಣ್ಯ ಕ್ಷೇತ್ರಕ್ಕೆ ಹೋಗುತ್ತಿದ್ದೇನೆ. ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಶನಿವಾರಸಂತೆ ಜೆಡಿಎಸ್ ಪ್ರಮುಖರಾದ ಹರೀಶ್, ಮೋಹನ್ ಧರ್ಮಪ್ಪ, ಮಹಮ್ಮದ್, ಪ್ರಮುಖರು ಇದ್ದರು.
