ಬೆಂಗಳೂರು ನಗರದ ಕಸದಲ್ಲಿ ಮಾನವನ ಮೂಳೆ ಪತ್ತೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನತೆ
ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಮೊದಲು ಮಾನವನ ತಲೆ ಬುರುಡೆ ತೋರಿಸಿದ್ದ. ಇದರ ಬೆನ್ನಲ್ಲೇ ಈ ಬುರುಡೆ ಕೇಸ್ ಭಾರೀ ಸಂಚಲನ ಮೂಡಿಸಿತ್ತು. ಆದ್ರೆ, ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯ ಬುರುಡೆ ಬಿಟ್ಟಿರುವುದು ಒಂದೊಂದೇ ಬೆಳಕಿಗೆ ಬರುತ್ತಿದೆ. ಇಡೀ ರಾಜ್ಯವೇ ಧರ್ಮಸ್ಥಳದತ್ತ ನೋಡುತ್ತಿರುವಾಗ ಇತ್ತ ಬೆಂಗಳೂರಿನಲ್ಲಿ ಕಸ ಹಾಕುವ ಸ್ಥಳದಲ್ಲಿ ಮಾನವನ ಮೂಳೆಗಳು ಪತ್ತೆಯಾಗಿದ್ದು, ಜನರು ಬೆಚ್ಚಿಬಿದಿದ್ದಾರೆ. ಅತ್ತ ಧರ್ಮಸ್ಥಳದಲ್ಲಿ ಬುರುಡೆ ಸಂಚಲನ ಮೂಡಿಸಿದ್ರೆ, ಇತ್ತ ಬೆಂಗಳೂರಿನಲ್ಲಿ ಕಸದಲ್ಲಿ ಪತ್ತೆಯಾದ ಮಾನವನ ಮೂಳೆ ಬೆಚ್ಚಿಬೀಳಿಸಿದೆ. ಹೌದು…ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಕಸದ ರಾಶಿಯಲ್ಲಿ ಮನುಷ್ಯನ ಮೂಳೆಗಳು ಪತ್ತೆಯಾಗಿವೆ. ಹಬ್ಬದ ಸಂದರ್ಭದಲ್ಲೇ ಗಣೇಶ ದೇವಸ್ಥಾನದ ಬಳಿ ಮನುಷ್ಯನ ಮೂಳೆಗಳು ಪತ್ತೆ ಆಗಿರುವುದು ಸ್ಥಳೀಯರು ಆತಂಕಗೊಂಡಿದ್ದಾರೆ. ಕೂಡಲೇ ವಿಷಯ ತಿಳಿಸಿದು ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರ ಭೇಟಿ ಪರಿಶೀಲಿಸಿದ್ದು, ಬಳಿಕ ವ್ಯಕ್ತಿಯೋರ್ವ ತನ್ನ ಮೆಡಿಕಲ್ ಓದುತ್ತಿರುವ ಮಗಳಿಗಾಗಿ ಈ ಮೂಳೆಗಳನ್ನು ತಂದು ಬಳಿಕ ಬಿಸಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಭಯಗೊಂಡಿದ್ದ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಇಂದು (ಆಗಸ್ಟ್ 26) ಗೌರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಬ್ಬದ ಸಂಭ್ರಮದ ವೇಳೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೋವಿಂದಶೆಟ್ಟಿಪಾಳ್ಯದಲ್ಲಿ ಮನುಷ್ಯ ಮೂಳೆಗಳು ಕಸದಲ್ಲಿ ಪತ್ತೆಯಾಗಿವೆ. ಮಾಟ ಮಂತ್ರ ಮಾಡಲು ಮೂಳೆಗಳನ್ನು ಬಳಸಿರುವ ಶಂಕೆ ವ್ಯಕ್ತವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.