97 ಲಕ್ಷ ರೂಪಾಯಿ ಸಮೇತ ಬಾಡಿಗೆ ಕಾರು ಚಾಲಕ | ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪೊಲೀಸ್ ಸಿಬ್ಬಂದಿ
ಚಿತ್ರದುರ್ಗ:ಚಿತ್ರದುರ್ಗ ನಗರದ ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿ ಕಾರು ಚಾಲಕನೊಬ್ಬನು ಊಟಕ್ಕೆಂದು ನಿಲಿಸಿದ್ದ ಸಂದರ್ಭದಲ್ಲಿ ಹಣದ ಜೊತೆ ಚಾಲಕನು ಪರಾರಿಯಾಗಿದ್ದಾನೆ. ಈತನಿಂದ ಬೆಂಗಳೂರು ಮೂಲದ ನಿವೃತ್ತ ಎಸ್ಪಿ ಗುರುಪ್ರಸಾದ್ ಪತ್ನಿ ಜೊತೆ ಜಮೀನು ವ್ಯಾಜ್ಯ ವಿಚಾರವಾಗಿ ಬಳ್ಳಾರಿಗೆ ತೆರಳಿದ್ದರು, ಜಮೀನನ್ನು ಮಾರಾಟ ಮಾಡಿ 97 ಲಕ್ಷ ಹಣ ಪಡೆದು ಹಿಂತಿರುಗುವಾಗ ಹಣ ಮತ್ತು ಕಾರಿನ ಜೊತೆ ರಮೇಶ್ ಎಂಬಾತ ಆಂಧ್ರಪ್ರದೇಶಕ್ಕೆ ತೆರಳಲು ಯತ್ನಿಸಿದ್ದಾನೆ. ಸಿಪಿಐ ಕುಮಾರ್ ನೇತೃತ್ವದಲ್ಲಿ ಚಳ್ಳಕೆರೆ ಪೊಲೀಸ್ ಸಿಬ್ಬಂಧಿಗಳು ಸಿನಿಮೀಯ ರೀತಿಯಲ್ಲಿ ಆರೋಪಿ ರಮೇಶನನ್ನು ಬಂಧಿಸಿ, ಅವಾನ ಬಳಿಯಿದ್ದ 97 ಲಕ್ಷ ರೂಪಾಇ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
