ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಸಂಜಯನಗರದ ಸರ್ಕಾರಿ ಆಸ್ಪತ್ರೆ ಅಂಗಳದಲ್ಲಿ ಸಮಾಜಸೇವಕಿ ತೃಪ್ತಿರವಿರೆಡ್ಡಿ ಅವರು ನೇತೃತ್ವದಲ್ಲಿ ನೂರಾರು ಗಿಡನೆಟ್ಟು ಗಿಡಗಳಿಗೆ ನೀರೆರೆದರು.ಈ ವೇಳೆ ಮಾರತ್ತಹಳ್ಳಿ, ಸಂಜಯನಗರ, ಯಮಲೂರು ಅಂಗನವಾಡಿ ಕೇಂದ್ರದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಅರಿಶಿಣ ಕುಂಕುಮ, ಬಳೆ ಸೀರೆ ನೀಡಿ ಆಶೀರ್ವಾದ ಪಡೆದುಕೊಂಡರು. ಪರಿಸರ ಪ್ರೇಮಿ ಮಂಜು, ಸ್ಥಳೀಯ ಬಿಜೆಪಿ ಮಹಿಳಾ ಮುಖಂಡ ವೀಣಾ, ಬಸವರಾಜು, ಪರಿಸರ ಮಂಜು, ಸೇರಿದಂತೆ ನೂರಾರು ಮಹಿಳಾ ಮುಖಂಡರು, ಪರಿಸರ ಪ್ರೇಮಿಗಳು, ಸ್ಥಳೀಯ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
