ಬೆಂಗಳೂರು: ಸಿಬಿಐ,ಇಡಿ ಹಾಗೂ ಜಡ್ಜ್ ಹೆಸರಿನಲ್ಲಿ ಮಾಜಿ ಶಾಸಕ ಗುಂಡಪ್ಪರವರಿಗರ ಕರೆ ಮಾಡಿ ಬೆದರಿಕೆ ಹಾಕಿದ್ದು, ಮೊದಲ ಬಾರಿ ಆಗಸ್ಟ್ ೧೨ ರಂದು ಸಿಬಿಐ ಎಂದು ಕರೆ ಮಾಡಿ ನರೇಶ್ ಗೋಯಲ್ ಜೊತೆ ಅಕ್ರಮವಾಗಿ ಮನಿ ಲಾಂಡರಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಾ ಎಂದು ಹೆದರಿಸಿದ್ದಾರೆ. ಸಿಬಿಐ- ಡಿಸಿಪಿ ಎಂದು ಆ.೧೩ ರಂದು ಕರೆ ಮಾಡಿ ನೀವು ಡಿಜಿಟಲ್ ಅರೆಸ್ಟ್ ಆಗಿದ್ದೀರಾ ಎಂದು ಹೇಳಿ ವಂಚನೆ ಮಾಡಿದ್ದಾರೆ. ಅಲ್ಲದೆ ಖದೀಮರು ಕೋರ್ಟ್ಹಾಲ್ ರೀತಿ ಸೆಟ್ ಮಾಡಿ ನಂಬಿಕೆ ಹುಟ್ಟಿಸಿ ಬಳಿಕ ಆನ್ಲೈನ್ ನಲ್ಲಿ ಫೇಕ್ ಜಡ್ಜ್ ಮುಂದೆ ಹಾಜರುಪಡಿಸಿದಲ್ಲದೆ, ನಿಮ್ಮದೇನು ತಪ್ಪಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊ೦ಡಿ ಎಂದು 10 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಇಷ್ಟಕ್ಕೆ ನಿಲ್ಲದೆ ಬಳಿಕ ಪ್ರಾಪರ್ಟಿ ತನಿಖೆ ಮಾಡಬೇಕೆಂದು 20ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡು ನಂಬಿಸಿ ಹಂತ ಹಂತವಾಗಿ ೩೦ ಲಕ್ಷ ೯೯ ಸಾವಿರ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ತನಿಖೆ ನಂತರ ಮರಳಿ ಹಣವನ್ನು ಕೊಡುವುದಾಗಿ ಹೇಳಿದ್ದು, ವ್ಯಕ್ತಿಗರ ಹಣ ಮರಳಿ ಬಾರದಿದ್ದಾಗ ಮಾಜಿ ಶಾಸಕ ಗುಂಡಪ್ಪ ಸಿಸಿಬಿ, ಸೈಬರ್ ಕ್ರೈಂ ಪೊಲೀಸರಿಗೆ ದೂರ ನೀಡಿದ್ದಾರೆ. ಇನ್ನು ವಕೀಲರು ನೀಡಿದ ದೂರಿನನ್ವಯ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ
