#
ರಾಯಚೂರು : ರಾಯಚೂರು ತಾಲ್ಲೂಕಿನ ಗುರ್ಜಾಪುರ ಬಳಿ ಕೃಷ್ಣಾ ನದಿಗೆ ಸೇರುತ್ತಿರುವ ಭೀಮಾ ನೀರು. ರಾಯಚೂರಿನ ದೇವಸಗೂರು, ಕೋರ್ವಿಹಾಳ ಸೇರಿ ಹಲವು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ದೇವಸಗೂರು ಗ್ರಾಮದ ಐತಿಹಾಸಿಕ ರಾಮಲಿಂಗೇಶ್ವರ ದೇವಾಲಯ ಜಲಾವೃತಗೊಂಡಿದೆ, ಅಲ್ಲದೆ ನದಿ ಪಾತ್ರದಲ್ಲಿರುವ ನೂರಾರು ಎಕರೆಗೆ ನುಗ್ಗಿದ ನೀರಿಗೆ ಸಂಪೂರ್ಣ ಜಲಾವೃತವಾಗಿದೆ. ನದಿ ನೀರಿನ ಮಟ್ಟ ಹೆಚ್ಚಳವಾಗಿದ್ದು ನಾರಾಯಣಪುರ ಜಲಾಶಯದಿಂದ 1.22 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ಜಲಾಶಯದ ನೀರನ್ನು ಹೊರ ಬಿಟ್ಟ ಹಿನ್ನೆಲೆ ರೈತರಿಗೆ ಜಮೀನು ಜಲಾವೃತಗೊಂಡಿದ್ದು ರೈತರು ಸಾರ್ವಜನಿಕರು ಜಮೀನಿಗೆ ತೆರಳದಂತೆ ಎಚ್ಚರಿಸಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
