ಹುಣಸೂರು: ಚಿರತೆ ದಾಳಿಗೆ ಮೇಕೆ ಬಲಿಯಾಗಿರುವ ಘಟನೆಯೊಂದು ಹುಣಸೂರಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.ಹಿರಿಸಾವೆ ಗ್ರಾಮದ ಸತೀಶ್ ಎಂಬ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮೇಕೆ ಮೇಲೆ ಎರಡು ಚಿರತೆಗಳು ಹೊಂಚು ಹಾಕಿ ಮೇಕೆ ಮೇಲೆ ದಾಳಿ ಮಾಡಿ ಹೊತ್ತೊಯ್ದಿದಿವೆ. ಹೊತ್ತೊಯ್ಯುವಂತಹ ಸಂದರ್ಭದಲ್ಲಿ ಜನರು ಜೋರಾದ ಶಬ್ಧ ಮಾಡಿದ ತಕ್ಷಣ ಮೇಕೆಯನ್ನು ಬಿಟ್ಟು ಚಿರತೆಗಳು ಪರಾರಿಯಾಗಿವೆ.ತಕ್ಷಣ ಸ್ಥಳೀಯರು ಬ್ಯಾಟರಿ-ಟಾರ್ಚ್ ಹಿಡಿದು ಗದ್ದಲ ಮಾಡಿ ಚಿರತೆಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಗದ್ದಲ ಮಾಡಿದಾಗ ಚಿರತೆಗಳು ಓಡಿಹೋಗಿವೆ ಇಂತಹ ಘಟನೆಗಳು ಹಲವು ಬಾರಿ ದಾಳಿ ಮಾಡಿವೆ ಇದರ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಕ್ಷಣ ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯ.
